ಬೆಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ರಾಜ್ಯದ ವಿವಿಧೆಡೆ ಎಂಟು ಮಂದಿ ದುರ್ಮರಣ

7

ಬೆಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ರಾಜ್ಯದ ವಿವಿಧೆಡೆ ಎಂಟು ಮಂದಿ ದುರ್ಮರಣ

Published:
Updated:

ಬೆಳಗಾವಿ: ಸವದತ್ತಿ ತಾಲ್ಲೂಕು ಶಿವಾಪುರ ಬಳಿ ಗೋಕಾಕ- ಯರಗಟ್ಟಿ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ಇಂಡಿಕಾ ಕಾರು ನಾಲೆಗೆ ಬಿದ್ದು ಅದರಲ್ಲಿದ್ದ ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದಾರೆ.

ಪಾರವ್ವ ಪೂಜೇರಿ (45), ಲಗಮವ್ವ ಪೂಜೇರಿ (38), ಪಕ್ಕೀರವ್ವ ಪೂಜೇರಿ (29), ಹನುಮಂತ ಪೂಜೇರಿ (60) ಹಾಗೂ ಲಕ್ಷ್ಮಿ ಪೂಜೇರಿ (40) ಮೃತರು.

ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾರೆ. ಮೃತರೆಲ್ಲರೂ ಕಡಬಿ ಗ್ರಾಮದವರು. 

ಮೃತದೇಹಗಳು ಹಾಗೂ ಕಾರನ್ನು ನಾಲೆಯಿಂದ ಹೊರತೆಗೆಯಲಾಗಿದೆ. ರಾಜ್ಯ ವಿಪತ್ತು ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರು ಹಾಗೂ ಕ್ರೇನ್ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
ಹುಣಸೂರು ತಾಲ್ಲೂಕಿನ ಬಿಳಿಕೆರೆ ಸಮೀಪ ಮಂಗಳವಾರ ಬೆಳಿಗ್ಗೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಿರಣ್ (27), ರೋಶನ್ (17) ಮೃತಪಟ್ಟವರು.

***

ಕಡಲ ತೀರದಲ್ಲಿ ವ್ಯಕ್ತಿಯ ಕೊಲೆ
ಗೋಕರ್ಣ:
ಇಲ್ಲಿನ ಕುಡ್ಲೆ ಬೀಚ್‌ನಲ್ಲಿ ಸ್ಥಳೀಯ ನಿವಾಸಿ ರವಿ ಉಪಾಧ್ಯ(43) ಅವರನ್ನು ದುಷ್ಕರ್ಮಿಗಳು ಸೋಮವಾರ ತಡರಾತ್ರಿ ಕೊಲೆ ಮಾಡಿದ್ದಾರೆ. ಕೊಲೆಗಾರರು ಯಾರು ಮತ್ತು ಯಾಕೆ ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಘಟನೆ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !