ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧ್ಯಾನ ಮನಸ್ಸಿನ ಸ್ನಾನ’ ಉಪನ್ಯಾಸ ನಾಳೆ

Published 2 ಜೂನ್ 2023, 16:28 IST
Last Updated 2 ಜೂನ್ 2023, 16:28 IST
ಅಕ್ಷರ ಗಾತ್ರ

ಗೋಕಾಕ: ಇಲ್ಲಿನ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ-ಮಂಥನ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 4ರಂದು ಸಂಜೆ 6ಕ್ಕೆ 165ನೇ ಶಿವಾನುಭವಗೋಷ್ಠಿಯನ್ನು ನಗರದ ಗುರುವಾರ ಪೇಟೆಯ ಶೂನ್ಯ ಸಂಪಾದನಮಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾನ್ನಿಧ್ಯವನ್ನು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದು, ಚಿಂತಕ ರಾಜಸ್ಥಾನದ ಆಧ್ಯಾತ್ಮಿಕ ಚಿಂತಕ ಡಾ.ಪರಶುರಾಮ ನಾಯಿಕ್ ‘ಧ್ಯಾನ ಮನಸ್ಸಿನ ಸ್ನಾನ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೋಷ್ಠಿ ನಿಮಿತ್ತ ಜರುಗುವ ದಾಸೋಹ ವ್ಯವಸ್ಥೆಯ ದಾಸೋಹಿಗಳಾದ ಪ್ರಸನ ಪಾಟೀಲ ಮತ್ತು ಲೋಕಯ್ಯಾ ಹಿರೇಮಠ, ಲಿಂಗಾಯತ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ ಮತ್ತು ವಚನ ಸಾಹಿತ್ಯ ಚಿಂತನ-ಮಂಥನ ವೇದಿಕೆ ಅಧ್ಯಕ್ಷ ಡಾ. ಸಿ.ಕೆ.ನಾವಲಗಿ ಮತ್ತಿತರರು
ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Cut-off box - ಗುತ್ತೆಪ್ಪ ದೇವರ ಜಾತ್ರೆಗೆ ಚಾಲನೆ ನಾಗರಮುನ್ನೋಳಿ: ಸಾಧು ಸಂತರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಕವಲಗುಡ್ಡದ ಸಿದ್ಧ ಶಿವಯೋಗಿ ಅಮರೇಶ್ವರ ಮಹಾರಾಜರು ಹೇಳಿದರು. ಗ್ರಾಮದ (ನಾಗರಾಳ ಕೋಡಿಯ) ಗುತ್ತೆಪ್ಪ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದ ಅವರು ‘ಭಂಡಾರದ ಜಾತ್ರೆಯಿಂದ ಭಕ್ತಿ ಹೆಚ್ಚಾಗುತ್ತದೆ. ಹಾಲುಮತ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ನಮ್ಮ ಮಕ್ಕಳು ಸಮಾಜದಲ್ಲಿ ಮೌಲ್ಯಯುಕ್ತ ವ್ಯಕ್ತಿಯಾದಾಗ ಮಾತ್ರ ನಾವು ಹುಟ್ಟಿದ್ದು ಸ್ವಾರ್ಥಕವಾಗುತ್ತದೆ’ ಎಂದರು. ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಮಾತನಾಡಿದರು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕಿರಣ ಕಲ್ಲೋಳಿಕರ ಶಂಕರ ನೇರ್ಲಿ ಲಕ್ಷ್ಮೀಸಾಗರ ಈಟಿ ರಾಜು ಕುಂಬಾರ ಶಿವಾನಂದ ಮರ್ಯಾಯಿ ಸುಭಾಷ ಕೊಟಬಾಗಿ ಸಂಜು ಡೊಣವಾಡೆಭೀರಪ್ಪ ನಾಗರಾಳೆ ರಾಮಪ್ಪ ನಾಗರಾಳೆ ಅಡಿವೆಪ್ಪ ಪೂಜೆರಿ ಸಿದ್ದು ನಾಗರಾಳೆ ಮಾಯಪ್ಪ ನಾಗರಾಳೆ ಬಸವಣ್ಣಿ ಕುಂಬಾರ ಅನಿಲ ಈಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT