ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮೊದಲ ದಿನ ಸಿಇಟಿ ಸುಗಮ

Published 20 ಮೇ 2023, 15:48 IST
Last Updated 20 ಮೇ 2023, 15:48 IST
ಅಕ್ಷರ ಗಾತ್ರ

ಬೆಳಗಾವಿ: ಎಂಜಿನಿಯರಿಂಗ್‌ನ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಜಿಲ್ಲೆಯಲ್ಲಿ ಶನಿವಾರ ಆರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೊದಲ ದಿನ ಸುಗಮವಾಗಿ ನಡೆಯಿತು. 3,159 ವಿದ್ಯಾರ್ಥಿಗಳು ಗೈರು ಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 17 ಕೇಂದ್ರಗಳಲ್ಲಿ ಬೆಳಿಗ್ಗೆ ಜೀವವಿಜ್ಞಾನ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6,728 ವಿದ್ಯಾರ್ಥಿಗಳ ಪೈಕಿ 5,218 ಮಂದಿ ಪರೀಕ್ಷೆಗೆ ಹಾಜರಾದರು. 1,510 ಮಂದಿ ಗೈರಾದರು. ಮಧ್ಯಾಹ್ನ ನಡೆದ ಗಣಿತ ಪರೀಕ್ಷೆಗೆ 6,728 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 6,076 ವಿದ್ಯಾರ್ಥಿಗಳು ಹಾಜರಾದರು. 652 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 23 ಕೇಂದ್ರಗಳಲ್ಲಿ ಬೆಳಿಗ್ಗೆ ನಡೆದ ಜೀವವಿಜ್ಞಾನ ಪರೀಕ್ಷೆಗೆ 8,476 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 7,965 ವಿದ್ಯಾರ್ಥಿಗಳು ಹಾಜರಾದರು. 511 ವಿದ್ಯಾರ್ಥಿಗಳು ಗೈರಾದರು. ಮಧ್ಯಾಹ್ನ ನಡೆದ ಗಣಿತ ಪರೀಕ್ಷೆಗೆ 8,476 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 7,990 ವಿದ್ಯಾರ್ಥಿಗಳು ಹಾಜರಾದರು. 486 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT