ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಕೊಂಚ ಹೆಚ್ಚಾಗಿದ್ದು, ಕೃಷ್ಣಾ ಹಾಗೂ ಉಪನದಿಗಳಲ್ಲಿ ನೀರು ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ. ಮಹಾರಾಷ್ಟ್ರ ವ್ಯಾಪ್ತಿಯ ಅಣೆಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿಸಲಾಗುತ್ತಿದೆ.
ರಾಜಾಪೂರೆ ಬ್ಯಾರೇಜ್‌ನಿಂದ 2,44,757 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಲ್ಲೋಳ ಬಳಿಯ ಕೃಷ್ಣಾ ನದಿಯ ಸಂಗಮ ಸ್ಥಳದಲ್ಲಿ ದೂದಗಂಗಾ ನದಿಗೆ 45,050 ಕ್ಯುಸೆಕ್, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯ ಕೃಷ್ಣಾ ನದಿಗೆ ಒಟ್ಟು 2,89,807 ಕ್ಯುಸೆಕ್ ನೀರು ಹರಿಸಲಾಗಿದೆ.
ಹಿಪ್ಪರಗಿ ಬ್ಯಾರೇಜಿನಲ್ಲಿ 2,91,697 ಕ್ಯುಸೆಕ್ ಒಳ ಹರಿವು, 2,90,947 ಕ್ಯುಸೆಕ್ ಹೊರ ಹರಿವು ಇದೆ. ಜಲಾವೃತಗೊಂಡ ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅವರು ಕಲ್ಲೋಳ, ಯಡೂರ ಸೇರಿದಂತೆ ಹಲವು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.