ಬೆಳಗಾವಿ: ಬಾಲ್ಯವಿವಾಹಕ್ಕೆ ಒಳಗಾಗಿ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ಪಡೆದಿದ್ದ ಬಾಲಕಿ ಮದುವೆ ಆಗಿದ್ದ ಚಂದ್ರಕಾಂತ ಲಾವಗೆ ಎಂಬವನನ್ನು, ಬಾಲಕಿ ಅಪಹರಣದ ಪ್ರಕರಣದಡಿ ಬಂಧಿಸಲಾಗಿದೆ.

ಗೋಕಾಕ ತಾಲ್ಲೂಕಿನ 13 ವರ್ಷದ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿ,ಜುಲೈ 25ರಂದು ಆಶ್ರಯ ಕೇಂದ್ರದಲ್ಲಿ ಇರಿಸಿದ್ದರು.

‘ಜುಲೈ 30ರಂದು ಆಶ್ರಯ ಕೇಂದ್ರಕ್ಕೆ ಬಂದಿದ್ದ ಆರೋಪಿ ಚಂದ್ರಕಾಂತ ಲಾವಗೆ ನಾನು ಬಾಲಕಿಯ ಚಿಕ್ಕಪ್ಪ, ಮಾತ್ರೆ ಕೊಡಬೇಕಿದೆ ಎಂದು ಹೇಳಿದ್ದ. ಬಳಿಕ, , ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ ಬಾಲಕಿ ಸಮೇತ ಬೈಕ್ನಲ್ಲಿ ಪರಾರಿಯಾಗಿದ್ದ. ಜುಲೈ 31ರಂದು ಅಪಹರಣ ಪ್ರಕರಣ ದಾಖಲಿಸಿದೆವು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ಕುಮಾರ್ ತಿಳಿಸಿದರು.

‘ಸೋಮವಾರ ಆರೋಪಿ ಬಂಧಿಸಿ, ಬಾಲಕಿ ರಕ್ಷಿಸಲಾಯಿತು. ಇಂಥ ಘಟನೆಗಳು ತಪ್ಪಿಸಲು ಆಶ್ರಯ ಕೇಂದ್ರಗಳಿಗೆ ಭದ್ರತೆ ನೀಡಲಾಗುವುದು’ ಎಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.