ರಾಮದುರ್ಗ: ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಗಾರ ರೈತರು ಕಬ್ಬು ಕಟಾವು ಮತ್ತು ಕಬ್ಬು ಸಾಗಣೆ ಅನುಕೂಲಕ್ಕಾಗಿ ಸ್ಥಾಪಿತವಾಗಿರುವ ಬ್ಯಾಂಕ್ನಿಂದ ಸಹಕಾರಿಯಾಗಲಿದೆ ಎಂದು ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಅವರು ಹೇಳಿದರು.

ತಾಲ್ಲೂಕಿನ ಉದಪುಡಿ ಗ್ರಾಮದ ಗುಡಗುಂಟಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜಮಖಂಡಿಯ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ 13ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ರೈತರು ಅಲೆಯುವುದನ್ನು ತಪ್ಪಿಸಿ, ಶೀಘ್ರ ವಹಿವಾಟು ಮಾಡಿಕೊಳ್ಳುವಂತೆ ಮಾಡಲು ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಹೇಳಿದರು.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಂಬಂಧಿತ ಸಾಲ ಸೌಲಭ್ಯ ನೀಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಈ ಸಹಕಾರಿ ಬ್ಯಾಂಕ್ ಹೊಂದಿದೆ. ರೈತರು ಬ್ಯಾಂಕಿನ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಎಂ. ಚಂದರಗಿ ಗುರು ಗಡದೇಶ್ವರ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬನ್ನೂರ ಚಿಕ್ಕಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಾಗೋಜಿಕೊಪ್ಪ ಶಿವಯೋಗೇಶ್ವರ ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ಚೌಕಿಮಠದ ಸಚ್ಚಿದಾನಂದ ಸ್ವಾಮೀಜಿ, ಚಿಪ್ಪಲಕಟ್ಟಿ ಬ್ರಹ್ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಲೋಕಾಪೂರದ ಚಂದ್ರಶೇಖರ ಹಿರೇಮಠ ಸ್ವಾಮೀಜಿ ಹಾಗೂ ಬೀಡಕಿ ಗ್ರಾಮದ ಗಂಗಾಧರ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಾ. ಕೆ.ವಿ. ಪಾಟೀಲ, ಮುಖಂಡ ವೈ.ಎಚ್. ಪಾಟೀಲ, ಉದ್ಯಮಿ ರಮೇಶ ಪಂಚಕಟ್ಟಿಮಠ, ಮುರಗಯ್ಯ ವಿರಕ್ತಮಠ, ಭೀಮಪ್ಪ ಬಸಿಡೋಣಿ, ಟಿ.ಎನ್. ರಡ್ಡಿ, ಟಿ.ಪಿ. ಮುನ್ನೋಳ್ಳಿ, ರಾಜು ಮರಲಿಂಗನವರ, ಗೋಪಾಲ ಲಕ್ಷಾಣಿ, ಮಾರುತಿ ಕೊಪ್ಪದ, ಜನಕರಡ್ಡಿ ಹಕಾಟಿ, ನೇಮಣ್ಣ ಜಮಖಂಡಿ, ವಿರುಪಾಕ್ಷಯ್ಯ ಗುಡಗುಂಟಿ ಇದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಹೇಶ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.