ಮೂಡಲಗಿ: ‘ಶಿಕ್ಷಕರು, ಸಮುದಾಯದ ಜನರು ಒಗ್ಗಟಿನಿಂದ ಕಾರ್ಯ ಮಾಡಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿ ಬೆಳೆಯುತ್ತವೆ. ಇದಕ್ಕೆ ಹುಣಶ್ಯಾಳ ಶಾಲೆಯೇ ನಿದರ್ಶನ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಇಂಚಲ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಶ್ರೀನಿವಾಸ ರಾಮಾನುಜನ ಗಣಿತ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು,

‘ಶಾಲೆಯಲ್ಲಿ ಸಮುದಾಯ ಜನರು ನೀಡಿದ ₹1.50 ಲಕ್ಷ ವೆಚ್ಚದಲ್ಲಿ ನಲಿ–ಕಲಿ ಕೊಠಡಿ ನಿರ್ಮಿಸಿರುವುದು ಶಿಕ್ಷಣ ಪ್ರೀತಿ ಬಿಂಬಿಸುತ್ತದೆ. ಗ್ರಾಮೀಣ ಭಾಗದ ಜನರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ನಿರ್ಮಿಸಬೇಕು. ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಕ್ಷೇತ್ರದಲ್ಲಿ ಮೊದಲಿನಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ತೃಪ್ತಿ ನನಗಿದೆ’ ಎಂದರು.

ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಪ್ರಮುಖರಾದ ಅವ್ವಣ್ಣ ಡಬ್ಬನ್ನವರ, ಶಂಕರ ಇಂಚಲ, ಪುಂಡಲೀಕ ಸುಂಕದ, ರಾಮ ನಾಯಿಕ, ಶಬ್ಬೀರ ತಾಂಬಿಟಗಾರ, ಬಸು ಕಾಡಾಪೂರ, ಲಾಲಾಸಾಬ ಜಮಾದಾರ, ಮಹಾದೇವ ಖಡಿ, ಸುರೇಶ ಚಿಕ್ಕೋಡಿ, ಪಿಡಿಒ ಶಿವಾನಂದ ಗುಡಸಿ, ಸಿಆರ್ಪಿ ಆನಂದ ಹಮ್ಮನ್ನವರ, ಮುಖ್ಯ ಶಿಕ್ಷಕ ಮಹಾಂತೇಶ ಮಾಳಗೆ, ಎಸ್ಡಿಎಂಸಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.