ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ - ಬಿಜೆಪಿ ವಿಚಲಿತ: ಸಚಿವ ಸತೀಶ ಜಾರಕಿಹೊಳಿ

ಬಿಜೆಪಿ ಜಾರಿಗೊಳಿಸಿದ್ದ ಅನಗತ್ಯ ಯೋಜನೆ ಸ್ಥಗಿತ: ಸಚಿವ ಸತೀಶ ಜಾರಕಿಹೊಳಿ
Published 4 ಜೂನ್ 2023, 16:27 IST
Last Updated 4 ಜೂನ್ 2023, 16:27 IST
ಅಕ್ಷರ ಗಾತ್ರ

ಬೆಳಗಾವಿ: ‘ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ. ಈ ವಿಷಯ ಮರೆಮಾಚಲು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಆದರೆ, ಅವರ ಬಯಕೆ ಎಂದಿಗೂ ಈಡೇರುವುದಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ‌ ಜಾರಕಿಹೊಳಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದಲ್ಲಿದ್ದ ಜನಪರ ಯೋಜನೆಗಳನ್ನು ಮುಂದುವರೆಸುತ್ತೇವೆ. ಅನಗತ್ಯವಾದ ಯೋಜನೆ ಸ್ಥಗಿತಗೊಳಿಸುತ್ತೇವೆ. ಈಗ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ’ ಎಂದು ತಿಳಿಸಿದರು.

ಬೆಳಗಾವಿಗೆ ಬರಬೇಕಿದ್ದ ಯೋಜನೆಗಳು ಹುಬ್ಬಳ್ಳಿ–ಧಾರವಾಡ ಪಾಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ, ‘ಬೆಳಗಾವಿಯಿಂದ ಕಾರ್ಯಾಚರಣೆ ನಡೆಸಬೇಕಿದ್ದ ವಿಮಾನಗಳು ಹುಬ್ಬಳ್ಳಿಗೆ ಹೋಗಿವೆ. ಇದಕ್ಕೆ ಬಿಜೆಪಿ ಸಚಿವರೊಬ್ಬರು ಕಾರಣ. ಬೆಳಗಾವಿಗೆ ಹೆಚ್ಚಿನ ವಿಮಾನಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದಕ್ಕಾಗಿ ಶೀಘ್ರ ಸಭೆ ಕರೆಯಲಾಗುವುದು’ ಎಂದರು.

‘ತಾವು ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಉತ್ತಮ ಕೆಲಸ ಮಾಡಲಿಲ್ಲ. ಈಗ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಈಗ ನಮ್ಮ ಪಕ್ಷದವರು ಏನೇ ಹೇಳಿಕೆ ಕೊಟ್ಟರೂ ದುರುದ್ದೇಶದಿಂದ ವಿರೋಧಿಸುವುದು ಸರಿಯಲ್ಲ’ ಎಂದು ತಿವಿದರು.

ಬೆಳಗಾವಿ ಬ್ರೇಕಿಂಗ್..ಬೆಳಗಾವಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ. ಶಾಸಕ ವಿನಯ ಕುಲಕರ್ಣಿ ಗೆ ಸಚಿವ ಸ್ಥಾನ ಕೈ ತಪ್ಪಿದ ವಿಚಾರ ಹೆಚ್ಚಿನ ಶಾಸಕರು ಆಯ್ಕೆ ಆಗಿದ್ದಾರೆ.ಅನೇಕರನ್ನು ಸಮಾಧಾನ ಮಾಡಲು ಹೋಗಿ ಸಚಿವ ಸ್ಥಾನ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಈ ಸಲ ನಮ್ಮ ಸಮಾಜದ 37 ಜನ ಶಾಸಕರು ಆಯ್ಕೆಯಾಗಿದ್ದಾರೆ. ನಮ್ಮ ಸಮಾಜದಲ್ಲಿ 13 ಜನ ಶಾಸಕರು ಆಯ್ಕೆಯಾಗಿದ್ದೇವೆ.ಸಮಾಜ ಕಟ್ಟುವ ಕೆಲಸ ಮಾಡಿದ್ವಿ ಅದನ್ನು ಪಕ್ಷ ಗಮನಿಸಬೇಕಿತ್ತು. ಆದರೆ ಪಕ್ಷ ಇದನ್ನು ಗಮನಿಸಿಲ್ಲ. ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ವಿನಯ್ ಕುಲಕರ್ಣಿ.. ಸಮಾಜ ಸಹ ಇದನ್ನು ಸೂಕ್ಷ್ಮವಾಗಿ ಗಮನಿಸಿದೆ.ಲೋಕಸಭಾ ಚುನಾವಣೆ ವೇಳೆ ಇದರ ಪರಿಣಾಮ ಬೀರಿಲಿದೆ.ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ. ಖಾತೆ ಹಂಚಿಕೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದು ಎದ್ದು ಕಾಣುತ್ತದೆ. 13 ಜನರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ.ಇನ್ನೂ ಇಬ್ಬರು ಮೂರು ಜನ ಸಚಿವ ಸ್ಥಾನ ಕೇಳಿದ್ವಿ. ಸಮಾಜ ಕಟ್ಟುವ ಕೆಲಸ ಮಾಡಿ ನಮ್ಮ ಸಮಾಜದ ಮತ ಕಾಂಗ್ರೆಸ್ ಹೋಗೊ ನಿಟ್ಟಿನಲ್ಲಿ ಕೆಲಸ ಮಾಡಿದ್ವಿ. 135 ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಲಿಂಗಾಯತ ಮತದಾರರು ಕಾರಣ. ನಮ್ಮ ಪಕ್ಷದ ಮುಖಂಡರಿಗೆ ಇದನ್ನು ಹೇಳುವ ಪ್ರಯತ್ನ ಮಾಡುತ್ತೇನೆ. ನಿರ್ಲಕ್ಷ್ಯ ಮಾಡಿದಾಗ ಏನ್ ಪರಿಸ್ಥಿತಿ ಆಗಿದೆ‌ ಗಮನಕ್ಕೆ ತರುತ್ತೇನೆ. ವೀರೇಂದ್ರ ಪಾಟೀಲ್ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಬೆಂಬಲಿಸಿದೆ ಸಮಾಜ. ಇದನ್ನು ಪಕ್ಷ ಗಮನಿಸಬೇಕು.ಹಿಂದೆ ಆಗಿರೋ ತಪ್ಪನ್ನು ಕಾಂಗ್ರೆಸ್ ಮಾಡಬಾರದು. ಬರವಂತಹ ಸಂದರ್ಭದಲ್ಲಿ ಇವರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡ್ತಿವಿ‌. ಕೊಟ್ಟವರಿಗೆ ಕೊಟ್ಟದೇ ಹೊಸಬರಿಗೆ ಅವಕಾಶ ಕೊಡಬೇಕು ಎಂದ ವಿನಯ್ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT