ಬೆಳಗಾವಿ: ‘ಕ್ಯಾಪ್ಟನ್ ಆಗಲು ಟಾಸ್ ಹಾಕಿದವರು ಅವರಿಬ್ಬರೇ. ಹೆಡ್ ಬಿದ್ದಿದೆಯೋ ಅಥವಾ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸೂಚ್ಯವಾಗಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕ್ಯಾಪ್ಟನ್ (ಮುಖ್ಯಮಂತ್ರಿ) ಆಗಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಟಾಸ್ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ಅವರಿಗೆ ಏನು ಹೇಳಿದೆ ಎಂಬುದನ್ನು ಅವರನ್ನೇ ಕೇಳಬೇಕು. ಟಾಸ್ ಮಾಡಿದ ವಿಷಯ ದೆಹಲಿಯ ಫಿರೋಜ್ ಶಾ ಕೊಟ್ಲಾದಲ್ಲಿ ಮೈದಾನದಲ್ಲಿದೆ. ಕ್ಯಾಪ್ಟನ್ ಬದಲಾವಣೆ ಆಗುತ್ತಾರೋ ಅಥವಾ ಹಳೆಯ ಕ್ಯಾಪ್ಟನ್ ಮುಂದುವರೆಯುತ್ತಾರೋ ಅವರನ್ನೇ ಕೇಳಬೇಕು’ ಎಂದರು.

‘ಸದ್ಯ ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಅವರಿಬ್ಬರೂ ಕ್ಯಾಪ್ಟನ್ ಆಗಲು ಟಾಸ್ ಮಾಡುವಾಗ ಥರ್ಡ್ ಅಂಪೈರ್ ಕೂಡ ಇರಲಿಲ್ಲ. ಇಬ್ಬರಿಗೆ ಗೊತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.