ಬೆಳಗಾವಿ: ‘ಬಳ್ಳಾರಿಯಲ್ಲಿ ದ್ವೇಷದ ಅಸೂಯೆಯ ರಾಜಕೀಯಕ್ಕೆ ಓರ್ವ ಕಾರ್ಯಕರ್ತ ಬಲಿಯಾಗಿರುವುದು ಸತ್ಯ ಸಂಶೋಧನಾ ವರದಿಯಲ್ಲಿ ತಿಳಿದು ಬಂದಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಳ್ಳಾರಿ ಜಿಲ್ಲೆಯಲ್ಲಿ ಆಂಧ್ರಪ್ರದೇಶದ ಪ್ರಭಾವ ಇದೆ. ವಾಲ್ಮೀಕಿ ಮೂರ್ತಿ ಕಾರ್ಯಕ್ರಮದ ಬ್ಯಾನರ್ ಹಚ್ಚುವ ವಿಚಾರಕ್ಕೆ ಗಲಾಟೆಯಾಗಿದೆ. ಇದರಲ್ಲಿ ಅಮಾಯಕ ಕಾಂಗ್ರೆಸ್ ಕಾರ್ಯಕರ್ತನ ಸಾವು ಆಗಿದೆ. ಇದು ಎಫ್ಎಸ್ಎಲ್ ವರದಿಯಿಂದಲೇ ತಿಳಿದು ಬರಬೇಕು. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಆರೋಪ ಮಾಡುತ್ತಿರುವುದು ರಾಜಕೀಯ ಪ್ರೇರಿತ. ಖಾಸಗಿ ಗನ್ಮ್ಯಾನ್ ಇಟ್ಟುಕೊಂಡಿದ್ದು ಏಕೆ? ಉದ್ದೇಶಪೂರ್ವಕವಾಗಿ ಗಲಾಟೆಯಾಗಿದೆ ಎಂದು ಪ್ರತ್ಯೇಕದರ್ಶಿಗಳು ಹಾಗೂ ಖಾಸಗಿ ಸಂಘ, ಸಂಸ್ಥೆಗಳು ನಮ್ಮ ವಿಚಾರಣೆಯ ವೇಳೆ ಮಾಹಿತಿ ನೀಡಿವೆ’ ಎಂದರು.

‘ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಬಳ್ಳಾರಿ ಗಲಾಟೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ. ಗಲಾಟೆಯಲ್ಲಿ ಗುಂಡು ಹಾರಿಸಿದ್ದು ಯಾರು ಎನ್ನುವುದು ತಿಳಿದು ಬರಲಿದೆ’ ಎಂದರು.

‘ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಜನ ದುಡಿದಿದ್ದಾರೆ. ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಮುಖ್ಯಮಂತ್ರಿ ಹುದ್ದೆಯ ಕುರಿತು ಅವರನ್ನೇ ಕೇಳಿ’ ಎಂದರು.

‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ನಡೆಯುತ್ತಿವೆ. ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಹಾಕದಿರುವುದನ್ನು ಬಿಟ್ಟರೆ ಎಲ್ಲ ಯೋಜನೆ ಸುಗಮವಾಗಿ ನಡೆಯುತ್ತಿವೆ. ಬಿಜೆಪಿಗರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು’ ಎಂದರು.