ಬುಧವಾರ, ಜನವರಿ 19, 2022
19 °C

ಸರ್ವರಿಗೂ ಸಮಬಾಳು ನೀಡಿರುವ ಸಂವಿಧಾನ: ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ವಿಶ್ವದಲ್ಲೆ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ಒದಗಿಸಿದೆ’ ಎಂದು ಪ್ರಾಚಾರ್ಯ ಡಾ.ಉದಯಕುಮಾರ ದೊಡ್ಡಮನಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿದಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕಾಗಿ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ’ ಎಂದರು.

ಪ್ರೊ.ವಿಶ್ವನಾಥ ಪಾಟೀಲ ಮಾತನಾಡಿ, ‘ಭಾರತ ಸಂವಿಧಾನದ ರಚನೆಯ ಸ್ವರೂಪವು ಎಲ್ಲರನ್ನೂ ಒಳಗೊಳ್ಳುವ ಮೌಲ್ಯ ಆಧರಿಸಿದೆ’ ಎಂದು ಹೇಳಿದರು.

ಉಪನ್ಯಾಸಕರಾದ ವಿಲಾಸ ಕಾಂಬಳೆ, ಗೋದಾವರಿ ಪಾಟೀಲ, ಜ್ಯೋತಿ, ಶಿವಾನಂದ ಹಾಲೋಳ್ಳಿ, ಕೆ.ಎಸ್. ಬಿಜ್ಜರಗಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು