ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದಲ್ಲಿ 37 ದಿನಗಳಲ್ಲಿ 16 ಸಾವು!

Last Updated 7 ಮೇ 2021, 12:41 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ಗ್ರಾಮದಲ್ಲಿ ಏ. 1ರಿಂದ ಶುಕ್ರವಾರದವರೆಗೆ ಅಂದರೆ 37 ದಿನಗಳಲ್ಲಿ ಕೋವಿಡ್‌ನಿಂದ ಒಬ್ಬರು ಸೇರಿದಂತೆ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ. ಇದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಮೇ 3ರಿಂದ ಶುಕ್ರವಾರದವರೆಗೆ ನಿತ್ಯ 2 ಸಾವು ಸಂಭವಿಸಿವೆ. ಮೃತರಲ್ಲಿ ವಯಸ್ಕರೂ ಇದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಹೀಗಾಗಿ, ಅದು ಕೋವಿಡ್‌ ಸಾವು ಎನ್ನುವುದು ದೃಢಪಟ್ಟಿದೆ.

ಮೇ 2 ಹಾಗೂ 3ರಂದು ತಲಾ 1, ಮಂಗಳವಾರ 6, ಬುಧವಾರ 1 ಹಾಗೂ ಗುರುವಾರ 7 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲೂ ಇತ್ತೀಚಿನ ದಿನಗಳಲ್ಲಿ ಸರಣಿ ಸಾವುಗಳು ವರದಿ ಆಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನರು ಕೋವಿಡ್ ಚಿಕಿತ್ಸೆಗೆ ಮತ್ತು ಆಸ್ಪತ್ರೆಯ ಬಿಲ್‍ಗೆ ಹೆದರಿ ಮನೆಯಲ್ಲೇ ಉಳಿಯುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಕೆಲವರು ಆರೋಗ್ಯದಲ್ಲಿ ವ್ಯತ್ಯಾಸವಾದ ಒಂದೆರೆಡು ದಿನಗಳಲ್ಲಿಯೇ ನಿಧನರಾದ ಘಟನೆಗಳು ನಡೆದಿವೆ.

‘ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸಬೇಕು. ಸಾವಿಗೆ ಕಾರಣಗಳನ್ನು ಹುಡುಕಬೇಕು. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತ್ತಷ್ಟು ಅನಾಹುತಗಳು ಆಗುವುದನ್ನು ತಪ್ಪಿಸಬೇಕು’ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT