ಸೋಮವಾರ, ಜೂನ್ 14, 2021
20 °C

ಬೆಳಗಾವಿ: ಕೋವಿಡ್ ಸೋಂಕಿನಿಂದ 9 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ 171 ಜನರಿಗೆ ಹೊಸದಾಗಿ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಸೋಂಕಿತರಾದವರ ಸಂಖ್ಯೆ 7,981ಕ್ಕೆ ತಲುಪಿದೆ. ಮೂವರು ಮಹಿಳೆಯರು ಸೇರಿದಂತೆ 9 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದುವರೆಗೆ ಒಟ್ಟು 130 ಜನರು ಮೃತರಾಗಿದ್ದಾರೆ.

ಬೆಳಗಾವಿಯ ಪಿ–173915, ಪಿ–233675, ಪಿ– 223320, ಪಿ–163966, ಪಿ– 229722, ಪಿ–206661, ಗೋಕಾಕದ ಪಿ–226701, ಪಿ–194925 ಹಾಗೂ ಚಿಕ್ಕೋಡಿಯ ಪಿ–151404 ಮೃತರಾಗಿದ್ದಾರೆ.

ಜಿಲ್ಲೆಯಲ್ಲಿ 3,652 ಸಕ್ರಿಯ ರೋಗಿಗಳು ಇದ್ದಾರೆ. 279 ಜನರು ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆಯಾದರು. ಇದುವರೆಗೆ 4,199 ಜನರು ಗುಣಮುಖರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು