ಸೋಮವಾರ, ಆಗಸ್ಟ್ 19, 2019
28 °C

ಪ್ರವಾಹ: 1,410 ಕಿ.ಮೀ. ರಸ್ತೆಗೆ ಹಾನಿ

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದ್ದು, ಇದರಿಂದ ₹ 282.18 ಕೋಟಿ ನಷ್ಟ ಸಂಭವಿಸಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ₹ 39.31 ಕೋಟಿ ನಷ್ಟ ಉಂಟಾಗಿದೆ.

1,410 ಕಿ.ಮೀ. ರಸ್ತೆ ಹಾಳಾಗಿದ್ದು, 192.18 ಕೋಟಿ ಹಾನಿ ಸಂಭವಿಸಿದೆ. 211 ಸೇತುವೆಗಳು, 10 ಟ್ಯಾಂಕ್‌ಗಳು, 4,019 ಸರ್ಕಾರಿ  ಕಟ್ಟಡಗಳಿಗೆ ಹಾನಿಯಾಗಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ 92 ಯೋಜನೆಗಳು ಹಾಗೂ ವಿದ್ಯುತ್‌ ಪೂರೈಕೆ ಮಾರ್ಗದಲ್ಲಿ 2,575 ಸ್ಥಳಗಳಲ್ಲಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 161 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ಸೇನೆಯ 2 ತಂಡಗಳು, 5 ಎಸ್‌ಡಿಆರ್‌ಎಫ್‌, 4 ಎನ್‌ಡಿಆರ್‌ಎಫ್‌, 14 ಅಗ್ನಿಶಾಮಕ ತಂಡಗಳು, ಗೃಹರಕ್ಷಕ ದಳದ 150 ಸಿಬ್ಬಂದಿ ನಿಯೋಜಿಸಲಾಗಿದೆ. 17 ಯಾಂತ್ರಿಕ ಹಾಗೂ 15 ಮಾನವ ಚಾಲಿತ ದೋಣಿಗಳನ್ನು ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Post Comments (+)