ಗುರುವಾರ , ಮಾರ್ಚ್ 23, 2023
30 °C

ಅಥಣಿ: ಬನಸೋಡೆ ಕುಟುಂಬಕ್ಕೆ ಸವದಿ ಸಾಂತ್ವನ, ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿ ಸಾವಿಗೀಡಾದ ನಾಲ್ವರು ಸಹೋದರರ ಕುಟುಂಬದವರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶನಿವಾರ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹ 2 ಲಕ್ಷ ನೆರವು ನೀಡಿದರು.

ತಮ್ಮವರನ್ನು ಕಳೆದುಕೊಂಡಿರುವ ಬನಸೋಡೆ ಕುಟುಂಬದವರಿಗೆ ಧೈರ್ಯ ತುಂಬಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದುರಂತದ ಮಾಹಿತಿ ತಿಳಿದ ತಕ್ಷಣ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದೆ. ಎನ್‌ಡಿಆರ್‌ಎಫ್‌ನವರು ಸೇರಿದಂತೆ ಹಲವರು ಜೊತೆಗೂಡಿ ಕಾರ್ಯಾಚರಣೆ ನಡೆಸಿದರೂ ಆ ಸಹೋದರರನ್ನು ಜೀವಂತವಾಗಿ ರಕ್ಷಿಸುವ ನಮ್ಮ ಪ್ರಯತ್ನ ವಿಫಲವಾಯಿತು. ಶಾಸಕರು ಮತ್ತು ನಾನು ಸೇರಿ ಸರ್ಕಾರದಿಂದ ಸೌಲಭ್ಯ ಮತ್ತು ಪರಿಹಾರ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಶಾಸಕ ಮಹೇಶ ಕುಮಠಳ್ಳಿ, ‘ಈ ಕುಟುಂಬದವರ ಜೀವನ ನಿರ್ವಹಣೆಗೆ ನಾನೂ ವೈಯಕ್ತಿಕವಾಗಿ ₹ 1 ಲಕ್ಷ ನೀಡಿದ್ದೇನೆ’ ಎಂದರು.

ಮುಖಂಡರಾದ ಯಲ್ಲಾಲಿಂಗ ಪಾಟೀಲ, ಸುರೇಶ ವಾಡೇದ, ಚಂದ್ರಕಾಂತ ಕಾಗವಾಡ, ಮಹಾದೇವ ಜಾಬಗೌಡ, ಅಣ್ಣಪ್ಪ ಬಾಗಿ, ಗ್ರಾ.ಪಂ. ಅಧ್ಯಕ್ಷ ಪರಪ್ಪ ಶೇಗುಣಶಿ, ಮಹಾಂತೇಶ ಇಂಗಳಿ, ಸದಾಶಿವ ಬನಸೋಡೆ, ತಹಶೀಲ್ದಾರ್ ದುಂಡಪ್ಪ ಕೋಮಾರ, ಡಿವೈಎಸ್ಪಿ ಎಸ್.ವಿ. ಗಿರೀಶ, ತಾ.ಪಂ. ಇಒ ರವೀಂದ್ರ ಬಂಗಾರೆಪ್ಪನವರ, ಸಮಾಜ ಕಲ್ಯಾಣಾಧಿಕಾರಿ ಪ್ರವೀಣ ಪಾಟೀಲ, ಟಿಎಚ್‌ಒ ಡಾ.ಬಸಗೌಡ ಕಾಗೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು