ಬುಧವಾರ, ನವೆಂಬರ್ 25, 2020
22 °C

ಬೆಳಗಾವಿ: ಲಕ್ಷ್ಮಿಪೂಜೆಯೊಂದಿಗೆ ದೀಪಾವಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದೀಪಾವಳಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು.

ನಗರದಾದ್ಯಂತ ಮನೆಗಳಲ್ಲಿ ಆಕಾಶ ಬುಟ್ಟಿಗಳನ್ನು ಕಟ್ಟಿದ್ದುದು, ವಿದ್ಯುತ್‌ ದೀಪಾಲಂಕಾರ ಮಾಡಿದ್ದು ಮತ್ತು ಹಣತೆಗಳನ್ನು ಸಾಲು ಸಾಲಾಗಿ ಬೆಳಗಿದ್ದುದು   ಆಕರ್ಷಿಸಿತು. ಬಹುತೇಕ ಮನೆಗಳ ಎದುರು ಮಕ್ಕಳು, ಯುವತಿಯರು ಮತ್ತು ಮಹಿಳೆಯರು ಹಲವು ಬಣ್ಣಗಳಿಂದ ವೈವಿಧ್ಯಮಯ ರಂಗೋಲಿ ಬಿಡಿಸಿದ್ದು ಗಮನಸೆಳೆಯಿತು. ಈ ಆಚರಣೆ ಸೋಮವಾರದವರೆಗೂ ನಡೆಯಲಿದೆ.

ಮಳಿಗೆಗಳು, ಅಂಗಡಿಗಳು, ಕಚೇರಿಗಳು, ಹೋಟೆಲ್‌ಗಳು, ಕೆಲಸದ ಸ್ಥಳಗಳಲ್ಲಿ ಮಾಲೀಕರು ಲಕ್ಷ್ಮಿಪೂಜೆ ನೆರವೇರಿಸಿ ಒಳಿತಿಗಾಗಿ ಪ್ರಾರ್ಥಿಸಿದರು. ವಿವಿಧ ರೀತಿಯ ಸಿಹಿ ಪದಾರ್ಥಗಳು, ಚಕ್ಕುಲಿ, ಶಂಕರಪಾಳಿ, ಅವಲಕ್ಕಿ ಚೂಡಾ ಮೊದಲಾದವುಗಳನ್ನು ಬಂಧು–ಮಿತ್ರರಿಗೆ ನೀಡಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು