ಸಾಂಬ್ರಾ ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ಕಾರ್ಗೊ ಸೇವೆ ಆರಂಭಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ
ಜಗದೀಶ ಶೆಟ್ಟರ್ ಸಂಸದ ಬೆಳಗಾವಿ
ಅಂತರರಾಷ್ಟ್ರೀಯ ಸರಕು ಸೇವೆ ಆರಂಭಕ್ಕಾಗಿ ವಿಮಾನ ನಿಲ್ದಾಣದ ಪ್ರಾಧಿಕಾರದ ಜೊತೆ ಸಭೆ ನಡೆಸಲಾಗಿದೆ. ತ್ವರಿತವಾಗಿ ಈ ಬೇಡಿಕೆ ಈಡೇರಿಸಬೇಕು
ಸಂಜೀವ ಕತ್ತಿಶೆಟ್ಟಿ ಅಧ್ಯಕ್ಷ ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ
ಅಂತರರಾಷ್ಟ್ರೀಯ ಸರಕು ಸೇವೆಗೆ ಬೇಡಿಕೆ ಹೆಚ್ಚಿರುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಹೊಸ ಟರ್ಮಿನಲ್ ಕೆಲಸ ಪೂರ್ಣಗೊಂಡ ನಂತರ ಅದು ಕಾರ್ಯರೂಪಕ್ಕೆ ಬರಬಹುದು
ಎಸ್.ತ್ಯಾಗರಾಜನ್ ನಿರ್ದೇಶಕ ಸಾಂಬ್ರಾ ವಿಮಾನ ನಿಲ್ದಾಣ
ಚಂದ್ರಯಾನ–3ಕ್ಕೂ ಕೊಡುಗೆ
ಚಂದ್ರಯಾನ-3ರ ರಾಕೆಟ್ ಲ್ಯಾಂಡರ್ ಉಪಕರಣ ಮತ್ತು ರೋವರ್ ಅನ್ನು ಎತ್ತಲು ಅಗತ್ಯವಾದ ಬಿಡಿ ಭಾಗಗಳನ್ನು ಬೆಳಗಾವಿಯ ಸರ್ವೊ ಕಂಟ್ರೋಲ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿತ್ತು. ಆ ಮೂಲಕ ಬೆಳಗಾವಿಯ ಹಿರಿಮೆ ಚಂದ್ರನವರೆಗೆ ಚಿಮ್ಮಿತ್ತು. ಕಳೆದ 18 ವರ್ಷಗಳಿಂದ ಇಸ್ರೊಗೆ ಬೇಕಾದ ಹಲವು ಬಿಡಿ ಭಾಗಗಳನ್ನು ಬೆಳಗಾವಿ ಕೈಗಾರಿಕಾ ರಂಗವೇ ಪೂರೈಕೆ ಮಾಡುತ್ತಿದೆ ಎಂಬುದು ಗಮನಾರ್ಹ.