ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮ ಮಂದಿರ ಜೀರ್ಣೊದ್ಧಾರಕ್ಕೆ ಆಗ್ರಹ

Published 27 ಫೆಬ್ರುವರಿ 2024, 4:23 IST
Last Updated 27 ಫೆಬ್ರುವರಿ 2024, 4:23 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಬೇಕವಾಡ ಗ್ರಾಮದ ರುದ್ರಭೂಮಿಯಲ್ಲಿ ಚಿಕ್ಕದಾದ ರಾಮನ ದೇವಸ್ಥಾನವಿದೆ. ಇದನ್ನು ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಬೇಕು ಎಂದು ಇತಿಹಾಸ ಸಂಶೋಧಕ ಬಾಹುಬಲಿ ಹಂದೂರ ಆಗ್ರಹಿಸಿದ್ದಾರೆ.

‘ಬೇಕವಾಡ ಗ್ರಾಮ ತಾಲ್ಲೂಕು ಕೇಂದ್ರದಿಂದ  15 ಕಿ.ಮೀ ದೂರದಲ್ಲಿದೆ. ಇಲ್ಲಿನ ರುದ್ರಭೂಮಿಯಲ್ಲಿ ಜಂಬೂರಿ ಇಟ್ಟಿಗೆಯಿಂದ ನಿರ್ಮಾಣ ಮಾಡಿದ ಐದು ಅಡಿ ಎತ್ತರದ ಚಿಕ್ಕ ದೇವಾಲಯದಲ್ಲಿ ರಾಮನ ವಿಗ್ರಹವಿದೆ. ರಾಮನ ದೇವಾಲಯದ ಹಿಂಬದಿಯಲ್ಲಿ ಸೀತಾದೇವಿಯ ದೇವಾಲಯವಿದ್ದು, ಇದನ್ನೂ ಜಂಬೂರಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಸೀತೆಯ ದೇವಾಲಯದಲ್ಲಿ ಯಾವುದೇ ವಿಗ್ರಹ ಇಲ್ಲ. ದೇವಾಲಯವೂ ಅವಸಾನದ ಅಂಚಿನಲ್ಲಿದೆ' ಎಂದು ಮಾಹಿತಿ ನೀಡಿದ್ದಾರೆ.

‘ರಾಮ ಸೀತೆಯನ್ನು ಅರಸಿ ಹೋಗುವ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡಿರುವ ಸಾಧ್ಯತೆಗಳಿವೆ. ಈ ಗ್ರಾಮದಲ್ಲಿ ಜಂಬೂರಿ ಇಟ್ಟಿಗೆಯಿಂದ ನಿರ್ಮಾಣವಾದ ಹಲವು ಕಟ್ಟಡಗಳು ಮತ್ತು ದೇವಾಲಯಗಳಿವೆ. ಇವು ಗತಕಾಲದ ಮಹತ್ವ ಸಾರುತ್ತವೆ. ಇಲ್ಲಿ ಇನ್ನಷ್ಟು ಉತ್ಖನನ ನಡೆಸಬೇಕು’ ಅವರಯ ಪುರಾತತ್ವ ಇಲಾಖೆಯನ್ನು ಕೋರಿದರು.

ಸಾಮಾಜಿಕ ಕಾರ್ಯಕರ್ತ ಎಂ.ಕೆ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT