ಮಂಗಳವಾರ, ಏಪ್ರಿಲ್ 20, 2021
28 °C

ಮಾಳಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಕೃಷಿ ಹಾಗೂ ತರಕಾರಿ ಮಾರುವ ಕಾಯಕದಲ್ಲಿ ತೊಡಗಿರುವ ಹಿಂದುಳಿದ ಮಾಳಿ (ಮಾಲಗಾರ) ಸಮಾಜಕ್ಕೆ ಅಭಿವೃದ್ಧಿ ನಿಗಮ ರಚಿಸಬೇಕು’ ಎಂದು ಮುಖಂಡ ಸಂತೋಷ ಬಡಕಂಬಿ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಜನಸಂಖ್ಯೆ 40 ಲಕ್ಷಕ್ಕೂ ಜಾಸ್ತಿ ಇದೆ. ಇಂದಿಗೂ ಕೃಷಿಯನ್ನು ಮೂಲಕಸುಬನ್ನಾಗಿ ಆಧರಿಸಿ ಜೀವನ ಸಾಗಿಸುತ್ತಿದ್ದೇವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ್ದಿದ್ದೇವೆ. ಹೀಗಾಗಿ, ಪ್ರತ್ಯೇಕ ನಿಗಮ ಸ್ಥಾಪಿಸಿ ಅನುದಾನ ಒದಗಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿಗೆ ಬೇಡಿಕೆ ಬಗ್ಗೆ ಗಮನಕ್ಕೆ ತರುವುದಕ್ಕಾಗಿ ಜ.3ರಂದು ಆಚರಿಸಲಾಗುವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಂದಯ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಪತ್ರ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಸಮಾಜದವರು ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಮುಖಂಡ ಶ್ರೀಶೈಲ ಹಳ್ಳದಮಳ, ‘ಸಮಾಜದವರು ಆಂದೋಲನದಲ್ಲಿ ಭಾಗವಹಿಸಬೇಕು’ ಎಂದರು.

ಮುಖಂಡರಾದ ಮಹಾಂತೇಶ ಮಾಳಿ, ನಾಗಪ್ಪ ಉಗಾರೆ, ರವಿ ಬಡಕಂಬಿ, ಮಹಾದೇವ ಚಮಕೇರಿ, ಸದಾಶಿವ ಲಗಳಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಶ್ರೀಶೈಲ ಬಡಕಂಬಿ, ತ್ರಿಮೂರ್ತಿ ಶೇಡಬಾಳ, ಅನೀಲ ತೆವರಟ್ಟಿ, ಶಂಕರ ಬಡಕಂಬಿ, ಬಸವರಾಜ ಹಳ್ಳದಮಳ, ಮುರುಗೇಶ ಮೋಳೆ, ಬಸವರಾಜ ಬಡಕಂಬಿ, ಸಂತೋಷ ಕಿವಡಿ, ಚೇತನ ಮಾಳಿ, ಶ್ರೀಕಾಂತ ಬಡಕಂಬಿ, ಮುರುಗೇಶ ಶೇಡಬಾಳೆ, ಶ್ರೀಶೈಲ ಕಿವಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು