ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮದುರ್ಗ: ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ

Published 3 ಜೂನ್ 2024, 13:50 IST
Last Updated 3 ಜೂನ್ 2024, 13:50 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಬೀಳದ ಹಿನ್ನಲೆಯಲ್ಲಿ ತಾಲ್ಲೂಕಿನ ಬನ್ನೂರು ಗ್ರಾಮದ ಹಿರಿಯರು ಕತ್ತೆಗಳಿಗೆ ಮದುವೆ ಮಾಡಿ ವರುಣನ ಕೃಪೆಗೆ ಪ್ರಾರ್ಥನೆ ಮಾಡಿದರು.

ಕತ್ತೆಗಳು ಗ್ರಾಮ ಪ್ರವೇಶಿಸುತ್ತಿದ್ದಂತೆ ಅವುಗಳಿಗೆ ಅರಿಸಿನದ ನೀರು ಪ್ರೋಕ್ಷಣೆ, ಬಾಸಿಂಗ ಧಾರಣೆ, ಮಹಿಳೆಯರಿಗೆ ಕಂಕಣ ಕಟ್ಟಿ ಮಾಂಗಲ್ಯ ಮುಡಿಗೇರಿಸಿ ಗ್ರಾಮ ದೇವಿ ದುರ್ಗಾದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮದುವೆ ಮಾಡಿದರು.

ನಂತರ ಜೋಡಿ ಕತ್ತೆಗಳನ್ನು ಹಲಗೆ, ಕರಡಿ ಮಜಲುಗಳ ಸಮೇತ, ಆರತಿ ಮಾಡಿ ಗ್ರಾಮದ ತುಂಬ ಮೆರವಣಿಗೆ ಮಾಡಿದರು. ಮದುವೆಗೆ ಬಂದಿದ್ದ ಗ್ರಾಮಸ್ಥರಿಗೆ ಸಹಿ ಹಂಚಿ ಸಂಭ್ರಮಿಸಿದರು. 

ಮಹಿಳೆಯರು ಸೋಬಾನ ಪದಗಳನ್ನು ಹಾಡಿದರು. 

ಶಂಕ್ರಯ್ಯ ಹಿರೇಮಠ, ಅಡವಯ್ಯ ವೀರಕ್ತಮಠ, ಈರಯ್ಯ ವಸ್ತ್ರದ, ಮಲ್ಲಿಕಾರ್ಜುನ ಕುಂದ್ರಾಳ, ವಸಂತ ಹೊಸಮನಿ, ಬಾಬುಸಾಬ ಬಾಲ್ದಾರ, ನಾಗರಾಜ ಯಂಡಿಗೇರಿ, ಕಲ್ಲಪ್ಪ ಹೊಸಮನಿ, ಈರಣ್ಣ ರೂಗಿ, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT