ಭಾನುವಾರ, ನವೆಂಬರ್ 29, 2020
20 °C

‘ಮನೆಗಳಿಗೆ ನೀರಿನ ಸಂಪರ್ಕಕ್ಕೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ (ಸವದತ್ತಿ ತಾ.): ‘ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಶುದ್ಧವಾದ ಕುಡಿಯುವ ನೀರಿನ ಮಹತ್ವ ಪ್ರಮುಖವಾಗಿದೆ. ಹೀಗಾಗಿ, ಇಂತಹ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಿದೆ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಹರ್ಲಾಪೂರ ಗ್ರಾಮದ ಮಾರುತಿ ದೇವಸ್ಥಾನ ಆವರಣದಲ್ಲಿ ಶನಿವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಲ ಜೀವನ್ ಮಿಷನ್ ಅಡಿ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಸಂಪರ್ಕ ಕಲ್ಪಿಸುವ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮನೆಗಳಿಗೆ ನೇರವಾಗಿ ನೀರಿನ ಸಂಪರ್ಕ ಕಲ್ಪಿಸುವುದದರಿಂದ ನೀರಿಗಾಗಿ ಅಲೆಯುವುದು ತಪ್ಪುತ್ತದೆ’ ಎಂದರು.

ಮುಖಂಡರಾದ ಬಸಪ್ಪ ವಕ್ಕುಂದ, ಮಲ್ಲನಗೌಡ ನಿ. ಪಾಟೀಲ, ಫಕ್ಕೀರಪ್ಪ ವಕ್ಕುಂದ, ಪರವತಗೌಡ ಪಾಟೀಲ, ಶಿವಯೋಗಿ ಚಿಕ್ಕೂಪ್ಪ, ರಾಮಪ್ಪ ಕಿತ್ತೂರ, ರುದ್ರಪ್ಪ ಕುಂಬಾರ, ಉಮೇಶ ದಳವಾಯಿ, ಈರಣ್ಣ ಘಂಟಿ, ಅಶೋಕ ಹಡಪದ, ಹನಮಂತ ಗಾಂಜಿ, ಕೊಳ್ಳಪ್ಪಗೌಡ ಗಂದಿಗವಾಡ, ವಿರೂಪಾಕ್ಷ ಹನಸಿ, ಗಿರೀಶ ಸಕಪ್ಪನವರ, ಬಸಪ್ಪ ಶಿದ್ದಷಕ್ಕನವರ, ವೈ.ವೈ. ಕಾಳಪ್ಪನವರ, ಬಸವರಾಜ ಬಾರ್ಕಿ, ಶಿವಯೋಗಿ ಸಂಗಳದ, ಗುರಪ್ಪ ಕೆರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.