ಬೆಳಗಾವಿ: ‘ದುಶ್ಚಟಗಳಿಂದ ಹಲವಾರು ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ವ್ಯಸನಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು. ಯುವಜನೋತ್ಸವಗಳು ಸ್ಫೂರ್ತಿ ತುಂಬುತ್ತವೆ. ಜೀವನದಲ್ಲಿ ಸ್ಫೂರ್ತಿಯೇ ನಮ್ಮ ಶಕ್ತಿ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಕೇಂದ್ರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘ಎಲ್ಲರೂ ಒಂದಾದಾಗ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಿಸಲು ಸಾಧ್ಯ. ಅದು ಯುವಕರಲ್ಲಿ ಕೈಯಲ್ಲಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದೃಢ ಸಂಕಲ್ಪದಿಂದ ಸಮಾಜದಲ್ಲಿ ಬದಲಾವಣೆ ಕಾಣಲಿದೆ. ಸಮಾಜದಲ್ಲಿ ಮಾದಕವಸ್ತುಗಳ ನಿರ್ಮೂಲನೆ ಆಗುವಲ್ಲಿ ಯುವಕರ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿ ಸಮಯ ಅತ್ಯಂತ ಮೌಲ್ಯವಾಗಿದ್ದು ಈ ಸಮಯದಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಉತ್ತಮ ಜೀವನ ನಡೆಸಬೇಕು. ಹೊಸತನದಿಂದ ತಮ್ಮಲ್ಲಿರುವ ಶಕ್ತಿ ಅರಳಿ, ಜಾಗತಿಕ ಮನ್ನಣೆ ಪಡೆಯುತ್ತದೆ. ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿ ಬೆಳೆದು ಅದುವೇ ಜೀವನದ ವಿಧಾನವಾಗುತ್ತದೆ’ ಎಂದರು.

ಶಾಸಕ ಆಸೀಫ್ ಸೇಠ್, ಸಿಪಿಐ ಜೆ.ಎಂ. ಕಾಲಿಮಿರ್ಚಿ ಮಾತನಾಡಿದರು. ಆರ್ಸಿಯು ಕುಲಸಚಿವ ಸಂತೋಷ ಕಾಮಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ. ಶ್ರೀನಿವಾಸ, ಸಂಗೊಳ್ಳಿ ರಾಯಣ್ಣ ವಿದ್ಯಾಲಯದ ಪ್ರಾಚಾರ್ಯ ಎಸ್.ಸಿ. ಪಾಟೀಲ, ರಾಷ್ಟ್ರೀಯ ಯವ ಪ್ರಶಸ್ತಿ ಪುರಸ್ಕೃತ ಮಲ್ಲೇಶ ಚೌಗಲಾ, ರಾಜ್ಯ ಯವ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ದುರದುಂಡಿ, ವಿಠ್ಠಲ ಮುರಕ್ಕಿಬಾವಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು ಇದ್ದರು.

ಯುವಪೀಳಿಗೆ ಮೊಬೈಲ್ ಗೀಳು ಬಿಟ್ಟು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕಿದೆ. ಹಬ್ಬ ಕ್ರೀಡೆಗಳು ಸಾಂಸ್ಕೃತೀಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು
ಆಸೀಫ್ ಸೇಠ್ ಶಾಸಕ

ಪೊಲೀಸ್ ಠಾಣೆಗಳೂ ಮೊದಲೂ ಭಯದ ಕೇಂದ್ರಗಳಾಗಿದ್ದವು. ಈಗ ಇಲಾಖೆ 112 ಸಹಾಯವಾಣಿಯ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ
ಜೆ.ಎಂ.ಕಾಲಿಮಿರ್ಚಿ ಸಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.