ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ

Published : 19 ಆಗಸ್ಟ್ 2024, 13:15 IST
Last Updated : 19 ಆಗಸ್ಟ್ 2024, 13:15 IST
ಫಾಲೋ ಮಾಡಿ
Comments

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಆಗಸ್ಟ್‌ 15ರಿಂದ ಪ್ರಾರಂಭವಾಗಿರುವ ಮಹಾ ದುರ್ಗಾದೇವಿಗೆ ಸಹಸ್ರ ಕಳಶಾಭಿಷೇಕ, ಶತಚಂಡಿಕಾ ಹೋಮ, ಶ್ರೀ ಚಕ್ರ ಪೂಜೆ ಕಾರ್ಯಕ್ರಮಕ್ಕೆ ರಾಜ್ಯವೂ ಸೇರಿ ಹೊರರಾಜ್ಯಗಳ ಅಧಿಕ ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಯೊಂದಿಗೆ ಭಾಗವಹಿಸಿದ್ದಾರೆ.

ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಾಗಿವೆ. ಜ್ಯೋತಿಷಿ ವಿಷ್ಣು ಪ್ರಸಾದ ಹೆಬ್ಬಾರ ಹಾಗೂ ಅರ್ಚಕ ರಾಜಪ್ಪ ಹೊಸಮನಿ ಅವರ ನೇತೃತ್ವದಲ್ಲಿ ಆಗಸ್ಟ್‌ 23 ರವರೆಗೆ ಈ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆಯಲಿವೆ.

ಗಣ್ಯರು ಮತ್ತು ಗ್ರಾಮಸ್ಥರು ಒಂಬತ್ತು ದಿನಗಳ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ದೇವಿ ದರ್ಶನಕ್ಕೆ ಬಂದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆಯೂ ನಿಗಾ ವಹಿಸಿದ್ದಾರೆ.

ಐದನೇ ದಿನವಾಗಿದ್ದ ಸೋಮವಾರ ಮುಂಜಾನೆ ಅಧರ್ವ ಶಿರಸಾ ಗಣಹೋಮ, ತತ್ವಹೋಮ ಮಧ್ಯಾಹ್ನ ಮಹಾ ಪೂಜೆ, ಶ್ರೀಚಕ್ರಪೂಜೆ, ಮಧ್ಯಾಹ್ನ 2ರಿಂದ ರಾತ್ರಿ 8.30ರ ವರೆಗೆ ಶ್ರೀಚಕ್ರ ಪೂಜೆ, ನವರಣಾ ಕೀರ್ತನೆ, ನೃತ್ಯ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಭಕ್ತ ಸಮೂಹ ವೀಕ್ಷಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT