ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಹಿಳಾ ಮತದಾರರ ಸಂಖ್ಯೆ ಹೆಚ್ಚಳ

ಬೆಳಗಾವಿ ಜಿಲ್ಲೆಯಲ್ಲಿದ್ದಾರೆ 1 ಸಾವಿರ ಪುರುಷ ಮತದಾರರಿಗೆ 979 ಮಹಿಳಾ ಮತದಾರರು
Last Updated 26 ಮಾರ್ಚ್ 2023, 8:44 IST
ಅಕ್ಷರ ಗಾತ್ರ

ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್(ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿ ಕೈಗೊಳ್ಳುತ್ತಿರುವ ಚಟುವಟಿಕೆಗಳ ಪರಿಣಾಮ, ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚುತ್ತಿದೆ.

ಕಳೆದ 4 ವರ್ಷಗಳಿಗೆ ಹೋಲಿಸಿ ದರೆ, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ, ಒಂದು ಸಾವಿರ ಪುರುಷ ಮತದಾರರಿಗೆ 975 ಮಹಿಳಾ ಮತದಾರರಿದ್ದರು. ಈಗ ಮಹಿಳಾ ಮತದಾರರ ಪ್ರಮಾಣ 979ಕ್ಕೆ ಏರಿಕೆಯಾಗಿದೆ.

18 ಕ್ಷೇತ್ರಗಳ ಪೈಕಿ ಹುಕ್ಕೇರಿ, ಗೋಕಾಕ, ಯಮಕನಮರಡಿ, ಬೆಳಗಾವಿ ಉತ್ತರ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ.

1.27 ಲಕ್ಷ ಮತದಾರರ ಹೆಚ್ಚಳ: 2019ರಲ್ಲಿ 19,10,731 ಪುರುಷರು, 18,63,259 ಮಹಿಳೆಯರು ಸೇರಿದಂತೆ 37,73,990 ಮತದಾರರಿದ್ದರು. 2023ರ ಜನವರಿ 5ರಂದು ಅಂತಿಮ ಪಟ್ಟಿ ಪ್ರಕಟಿಸಿದ ವೇಳೆ, ಮತದಾರರ ಸಂಖ್ಯೆ 38,33,037ಕ್ಕೆ ಏರಿಕೆಯಾಗಿತ್ತು. ಈ ಪೈಕಿ 19,36,887 ಪುರುಷರು, 18,96,150 ಮಹಿಳಾ ಮತದಾರರಿದ್ದರು.

ಚುನಾವಣೆ ಸಮೀಪಿಸುತ್ತಿದ್ದಂತೆ, ನೋಂದಣಿ ಪ್ರಕ್ರಿಯೆ ಚುರುಕುಗೊಂಡಿದೆ. ಮಾರ್ಚ್‌ 23ರ ವೇಳೆಗೆ, 19,68,928 ಪುರುಷರು, 19,32,576 ಮಹಿಳೆಯರು, 141 ಇತರರು ಸೇರಿದಂತೆ 39,01,645 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷಗಳಿಗೆ ಹೋಲಿಸಿದರೆ, 1.27 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಈ ಪೈಕಿ 58,197 ಪುರುಷರು, 69,317 ಮಹಿಳೆಯರು(ಪುರುಷರಿಗಿಂತ 11,120 ಹೆಚ್ಚು) ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಜಾಗೃತಿ ಮೂಡಿಸುತ್ತಿದ್ದೇವೆ: ‘ಸ್ವೀಪ್‌ ಸಮಿತಿಯು ಕಾಲೇಜುಗಳು, ಮಹಿಳಾ ಸಂಘ–ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಪರಿಣಾಮ, ಮಹಿಳಾ ಮತದಾರರು ಹೆಚ್ಚಿನ ಪ‍್ರಮಾಣದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಮತದಾನ ಮಹತ್ವದ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಚುನಾವಣೆಯಲ್ಲಿ ಮತ ಚಲಾವಣೆಗೆ ಯುವಕರು ಉತ್ಸಾಹ ತೋರುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ 76 ಸಾವಿರ ಯುವ ಮತದಾರರೂ ಹೆಸರು ನೋಂದಾಯಿಸಿಕೊಂಡಿದ್ದಾರೆ. 2023ರ ಏ.1ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ 11 ಸಾವಿರ ಮತದಾರರು, ನೋಂದಣಿಗೆ ಅರ್ಜಿ ಪಡೆದಿದ್ದಾರೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT