ಮಂಗಳವಾರ, ಅಕ್ಟೋಬರ್ 26, 2021
21 °C

ಸಂಕೇಶ್ವರ: ವಿದ್ಯುತ್‌ ಅವಘಡ; ಅಜ್ಜಿ-ಮೊಮ್ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಕೇಶ್ವರ: ಇಲ್ಲಿನ ಮಡ್ಡಿ ಗಲ್ಲಿಯಲ್ಲಿ ಭಾನುವಾರ ಮನೆಯ ಹಿತ್ತಲಲ್ಲಿ ಬಟ್ಟೆ ಒಣಗಿಸಲು ಹೋದ ಅಜ್ಜಿಗೆ ವಿದ್ಯುತ್‌ ಪ್ರವಹಿಸಿದಾಗ, ಆಕೆಯನ್ನು ರಕ್ಷಿಸಲು ಹೋದ ಮೊಮ್ಮಗನಿಗೂ ತಗುಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. 

ಇವರಿಬ್ಬರನ್ನು ವಿದ್ಯುತ್‌ ಅವಘಡದಿಂದ ತಪ್ಪಿಸಲು ಹೋದ ಸೊಸೆ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶಾಂತವ್ವಾ ದುಂಡಪ್ಪಾ ಬಸ್ತವಾಡಿ (85) ಹಾಗೂ ಸಿದ್ದಾರ್ಥ ಬಾಪು ಬಸ್ತವಾಡಿ(30) ಎಂದು ಗುರುತಿಸಲಾಗಿದೆ. ಸಂಕೇಶ್ವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.