ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ವಸತಿ ಬಡಾವಣೆಗೆ ಮಂಗಳವಾರ ಬೆಳಿಗ್ಗೆ ನುಗ್ಗಿದ ಕಾಡಾನೆ, ಮನೆ ಮುಂದಿದ್ದ ಕಾರಿಗೆ ಗುದ್ದಿ, ತುಳಿದು, ಬೀಳಿಸಿ ಜಖಂ ಗೊಳಿಸಿದೆ.

ಉಚಗಾಂವ- ಬೆಕ್ಕಿನಕೆರೆ ಮಾರ್ಗದಲ್ಲಿ ಡಾ.ನಿರಂಜನ್ ಕದಂ ಅವರ ಮನೆ ಆವರಣಕ್ಕೆ ಬೆಳಗಿನಜಾವ 1.30ರ ಸುಮಾರಿಗೆ ನುಗ್ಗಿದ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿದೆ. ಅಲ್ಲದೇ ಹತ್ತಿರವೇ ಇದ್ದ ಸಂಭಾಜೀರಾವ್ ಕದಂ ಮತ್ತು ಕಿರಣ್ ಕದಂ ಅವರ ಮನೆಯ ಬಳಿಯಿದ್ದ ಎರಡು ಪ್ಲಾಸ್ಟಿಕ್ ನೀರಿನ ಟ್ಯಾಂಕುಗಳನ್ನು ನಾಶಪಡಿಸಿದೆ.

ಈಚೆಗೆ ಬೆಳಗಾವಿ ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಗೋಡಂಬಿ ಕೀಳುತ್ತಿದ್ದ ರೈತನ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಗಾಯಗೊಂಡ ರೈತ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.