ಹುಕ್ಕೇರಿ: ‘ಹಿರಾ ಶುಗರ್ಸ್ ಆವರಣದಲ್ಲಿ ಈಗಾಗಲೇ ಸುಮಾರು 50,000 ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಲಾಗಿದೆ. ಇನ್ನೂ ಖಾಲಿ ಇರುವ ಕಾರ್ಖಾನೆಯ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 5,000 ಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡಲಾಗುವುದು’ ಎಂದು ಕಾರ್ಖಾನೆ ಅಧ್ಯಕ್ಷ ಮತ್ತು ಅಮ್ಮಣಗಿ ಜಿಲ್ಲಾ ಪಂಚಾಯ್ತಿ ಸದಸ್ಯ ನಿಖಿಲ್ ಕತ್ತಿ ಹೇಳಿದರು.

ಕಾರ್ಖಾನೆ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ಸಸಿನೆಟ್ಟು ನೀರುಣಿಸಿಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ, ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಮಾತನಾಡಿ, ‘1972ರಲ್ಲಿ ವಿಶ್ವ ಸಂಸ್ಥೆ ಜೂನ್ 5ನ್ನು ವಿಶ್ವ ಪರಿಸರ ದಿನ ಎಂದು ಘೋಷಿಸಿದ್ದು, ಆ ನಂತರದಲ್ಲಿ ಪ್ರಪಂಚದಾದ್ಯಂತ ಪರಿಸರ ಸಂರಕ್ಷಣೆಗೆ ವಿವಿಧ ಕಾರ್ಯಕ್ರಮ ಕೈಗೊಂಡು ಪರಿಸರ ದಿನ ಆಚರಿಸಲಾಗುತ್ತದೆ’ ಎಂದರು.

ನಿರ್ದೇಶಕ ಉದಯ ದೇಸಾಯಿ ಮಾತನಾಡಿ ಸಸ್ಯಶ್ಯಾಮಲೆಯ ಸಮೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಪರಿಸರ ಅಧಿಕಾರಿ ಎ.ಆರ್. ಚಾಟೆ, ಜಿ.ಎಂ. ಎಸ್.ಪಿ.ಪಾಟೀಲ, ಮುಖ್ಯ ಎಂಜಿನಿಯರ್ ವಿ.ಎಸ್. ಕತ್ತಿ, ಪಿ.ಎಂ.ಖೋತ, ವಿ.ಎಂ. ಬೆಲ್ಲದ, ಜೆ.ಪಿ. ಏಣಗಿಮಠ, ರಸಾಯನ ತಜ್ಞ ಎಂ.ಆರ್. ಪಾಟೀಲ, ಲೇಖಾಧಿಕಾರಿ ಕೆ.ಅರ್. ಬೆಟಗೇರಿ, ವಿ.ಟಿ.ಕುಲರ್ಣಿ, ಪಿ.ಎನ್. ಬೆಳವಿ, ಆರ್.ವಿ.ರೇವನ್ನವರ, ಅರಳಿಮಟ್ಟಿ, ಸಂರಕ್ಷಣಾಧಿಕಾರಿ ಬಿ.ಎಂ.ನಾಗನೂರಿ, ಕೇನಯಾರ್ಡ ಸುಪರವೈಜರ್ ಬಿ.ಎಸ್. ವರ್ಜಿ ಮತ್ತು ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.