ಚನ್ನಮ್ಮನ ಕಿತ್ತೂರು: ಸಗಟು ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಧಾರಣೆ ₹140 ರಿಂದ ₹120ಕ್ಕೆ ಕುಸಿದಿದ್ದು, ಬೆಳೆಗಾರರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಹಾಕಿದ ಖರ್ಚು ಸಹ ಗಿಟ್ಟುತ್ತಿಲ್ಲ ಎಂದು ತಾಲ್ಲೂಕಿನ ರೈತರು ಅಳಲು ತೋಡಿಕೊಂಡಿದ್ದಾರೆ.

ಜಮೀನಿನಲ್ಲಿ ಕಾಯಿ ಬೆಳೆಯಲು ಜಮೀನು ಸಿದ್ಧಪಡಿಸುವಿಕೆ, ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ), ತರುವು (ಸಸಿ) ನಾಟಿ, ರಸಗೊಬ್ಬರ, ಕ್ರಿಮಿನಾಶಕ, ಮೇಲು ಗೊಬ್ಬರ ನೀಡಲು ₹70 ಸಾವಿರ ಅಂದಾಜು ವೆಚ್ಚ ಮಾಡಲಾಗಿದೆ.

‘ಗಿಡಗಳು ಕಾಯಿಗಳನ್ನು ಬಿಡುತ್ತಿವೆ, ಧಾರಣಿ ಮಾತ್ರ ತೀವ್ರ ಕುಸಿತ ಆಗಿದೆ. ಕಾಯಿ ಕೊಯ್ಲು ಮಾಡುವವರಿಗೆ ದಿನದ ಕೂಲಿ ₹300 ಕೊಡಬೇಕು. ದಿನಕ್ಕೆ 30–35 ಕೆಜಿ ಮೆಣಸಿನಕಾಯಿ ಕೀಳುತ್ತಾರೆ. ನಮಗೆ ಉಳಿಯುವುದು ಕೇವಲ ₹60 ರಿಂದ ₹120 ಮಾತ್ರ. ಇದರಲ್ಲಿಯೇ ಸಾಗಾಟದ ವೆಚ್ಚ, ವಾಹನ ಬಾಡಿಗೆಯನ್ನೂ ನೀಡಬೇಕು’ ಎಂದು ತಿಗಡೊಳ್ಳಿಯ → ಬೆಳಗಾರ ಸುಧೀರ ಕ್ಯಾತನವರ ಅಳಲು ತೋಡಿ ಕೊಂಡರು.

‘ಕಳೆದ ವರ್ಷ ಕಾಯಿಗೆ ಭರ್ಜರಿ ಧಾರಣೆ ಇತ್ತು. 10 ಕೆ.ಜಿಗೆ ₹500ರಿಂದ ₹700 ವರೆಗೂ ಮಾರಾಟವಾಯಿತು. ಕೈತುಂಬ ಆದಾಯ ಬಂದಿತ್ತು. ಈಗ ನೋಡಿದರೆ ಮಾಡಿದ ವೆಚ್ಚವೂ ದಕ್ಕದಂತಾಗಿದೆ’ ಎಂದರು.

‘ರಾಜ್ಯ ಸರ್ಕಾರ ತಕ್ಷಣವೇ ಮೆಣಸಿನಕಾಯಿ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು. ಬೆಂಬಲ ಬೆಲೆ ಅಡಿ ಖರೀದಿಗೆ ಅವಕಾಶ ನೀಡಬೇಕು. ಈಗ ಪೂರ್ವಮುಂಗಾರು ಕೂಡಬಿರಿಸುನಿಂದ ಬೀಳುತ್ತಿದ್ದು, ಫಸಲಿಗೆ ರೋಗ ಬಾಧೆ ಬರುವ ಸಾಧ್ಯತೆ ಇದೆ. ಹೊಲದಲ್ಲಿಯೂ ಹೆಚ್ಚು ದಿನ ಬೆಳೆ ಬಿಡಲಾಗುವುದಿಲ್ಲ. ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಮುಖಂಡ ಸೋಮಶೇಖರ ಮುನವಳ್ಳಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.