ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಯಮಸಲ್ಲೇಖನದ ಮೂಲಕ ದೇಹ ತ್ಯಜಿಸಿದ ಧೈರ್ಯಮತಿ ಮಾತಾ

Published 3 ಆಗಸ್ಟ್ 2023, 10:33 IST
Last Updated 3 ಆಗಸ್ಟ್ 2023, 10:33 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಶಹಾಪುರದ ಕೋರೆ ಗಲ್ಲಿಯ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ 11 ದಿನಗಳಿಂದ ಯಮಸಲ್ಲೇಖನ ವ್ರತ ಕೈಗೊಂಡಿದ್ದ 105 ಧೈರ್ಯಮತಿ ಮಾತಾ (94) ಅವರು ಬುಧವಾರ ರಾತ್ರಿ ಜಿನೈಕ್ಯರಾದರು.

ಜೈನ ಧರ್ಮದ ವಿಧಾನಗಳಂತೆ ಮಾಣಿಕಬಾಗ್ ಬೋರ್ಡಿಂಗ್‌ನಲ್ಲಿ ಗುರುವಾರ ಅವರ ಅಂತ್ಯಕ್ರಿಯೆ ನೆರವೇರಿತು.

ಪುಣ್ಯಸಾಗರ ಮಹಾರಾಜ, ಪುರಾಣ ಸಾಗರ ಮಹಾರಾಜ ಹಾಗೂ ಪ್ರಸನ್ನಸಾಗರ ಮಹಾರಾಜ ಅವರ ಮಾರ್ಗದರ್ಶನದಲ್ಲಿ ನಗರದ ದಿಗಂಬರ ಜೈನ ಬೋಗಾರ ಸಮುದಾಯ ಭವನದಲ್ಲಿ ಅವರು ಯಮಸಲ್ಲೇಖನ ವ್ರತ ಆರಂಭಿಸಿದ್ದರು. ನೀರು, ಆಹಾರ ತ್ಯಜಿಸಿದ ಅವರು 11 ದಿನಗಳ ಬಳಿಕ ದೇಹ ತ್ಯಾಗ ಮಾಡಿದರು.

ಅವರ ಪೂರ್ವಾಶ್ರಮದ ಹೆಸರು ಪದ್ಮಾವತಿ ಇಜಾರೆ. ಸಲ್ಲೇಖನ ಕೈಗೊಳ್ಳುವ ಮುನ್ನ ಅವರು ಧೈರ್ಮಮತಿ ಎಂದು ನಾಮಕರಣಗೊಂಡಿದ್ದರು. ಗ್ರಹಸ್ಥರಾಗಿದ್ದ ಅವರು, ಹಲವು ವರ್ಷಗಳಿಂದ ಜೈನ ಧರ್ಮ ಸಂಪ್ರದಾಯ, ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದರು. 11 ಬಾರಿ ಸಮ್ಯೇದಸಿಖರ್‌ಜಿ ಯಾತ್ರೆ ಕೈಗೊಂಡಿದ್ದರು. ಚಾತುರ್ಮಾಸ್ಯವನ್ನೂ ಆಚರಿಸಿದ್ದರು ಎಂದು ಮಂದಿರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT