ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಗೆ ಸಲಹೆ: ಜೈನ ಲೆಕ್ಕಪತ್ರ ಪರಿಶೋಧಕರಿಗೆ ಸನ್ಮಾನ

Last Updated 15 ನವೆಂಬರ್ 2021, 13:10 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮಾಜ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಜಿತೋ ಅಪೆಕ್ಸ್‌ ನಿರ್ದೇಶಕ ಸತೀಶ ಮೆಹತಾ ಹೇಳಿದರು.

ಇಲ್ಲಿನ ಅನಗೋಳದಲ್ಲಿರುವ ಆದಿನಾಥ ಭವನದಲ್ಲಿ ಜೈನ ಯುವ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಜೈನ ಲೆಕ್ಕಪತ್ರ ಪರಿಶೋಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೈಲಾದ ಸೇವೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

‘ಜೈನ ಸಮಾಜ ಸಣ್ಣ ಸಮಾಜವಾಗಿದೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹಂಚಿ ಹೋಗಿದೆ. ಹಾಗಾಗಿ ನಮ್ಮಲ್ಲಿ ಪ್ರತಿನಿತ್ಯ ಆಗುಹೋಗುಗಳ ಬಗ್ಗೆ ನಿಖರವಾದ ಮಾಹಿತಿಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ತಮ್ಮ ಭಾಗದಲ್ಲಿ ಬಡ ವಿದ್ಯಾರ್ಥಿಗಳಿದ್ದರೆ ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ, ‘ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಲೆಕ್ಕಪತ್ರ ಪರಿಶೋಧಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜವು ನಿಮ್ಮಿಂದ ಬಹು ನಿರೀಕ್ಷೆಗಳನ್ನು
ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ತಾವು ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಲೆಕ್ಕಪತ್ರ ಪರಿಶೋಧಕ ಜಿ.ಎ. ಮೆಕ್ಕಳಕೆ, ‘ಸಂಘಟನೆಯ ಬೇಡಿಕೆಗಳ ಈಡೇರಿಕೆಗೆ ಪ್ರಥಮ ಆದ್ಯತೆ ನೀಡುತ್ತೇವೆ’ ಎಂದರು.

ಜಿತೋ ಕೆಕೆಜಿ ವಲಯ ಕಾರ್ಯದರ್ಶಿ ವಿಕ್ರಮ ಜೈನ ಮಾತನಾಡಿ, ‘ಜಿಲ್ಲೆಯಲ್ಲಿ 60 ಮಂದಿ ಜೈನ ಸಮಾಜದವರು ಲೆಕ್ಕಪತ್ರ ಪರಿಶೋಧಕರು ಇರುವುದು ಹೆಮ್ಮೆಯ ಸಂಗತಿಯಾಗಿದೆ. ಅವರು ಸಮಾಜ ಸೇವೆಯತ್ತ ಹೆಚ್ಚಿನ ಒಲವು ತೋರಬೇಕು. ಯುವ ಪೀಳಿಗೆಗೆ ಮಾದರಿಯಾಗಬೇಕು. ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು. ಉತ್ತಮ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಯುವಜನರಿಗೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

ಜೈನ ಸಮಾಜದ 40 ಲೆಕ್ಕಪತ್ರ ಪರಿಶೋಧಕರನ್ನು ಗೌರವಿಸಲಾಯಿತು.

ಲೆಕ್ಕಪತ್ರ ಪರಿಶೋಧಕರಾದ ಚೇತನ ಚೌಗುಲೆ, ಕುಂಥುಸಾಗರ ಹರದಿ, ಸಂಜಯ ಶಿರಗುಪ್ಪಿ, ಮೊನಿಕಾ ಜಿನಗೌಡಾ, ಭರತ ಪೋರವಾಲ ಮಾತನಾಡಿದರು.

ಜೈನ ಯುವ ಸಂಘಟನೆಯ ಅಭಯ ಅವಲಕ್ಕಿ ಸ್ವಾಗತಿಸಿದರು. ಪದ್ಮಾಕರ ಕತಗಲಿ ನಿರೂಪಿಸಿದರು. ಕುಂತಿನಾಥ ಕಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಪ್ರಸಾದ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT