ಶುಕ್ರವಾರ, ಏಪ್ರಿಲ್ 23, 2021
22 °C

ಬೆರಳು ಚೀಪುವ ಸ್ಪೆಷಲ್‌ ಮೀನೂಟ: ಬೆಳಗಾವಿಯಲ್ಲಿ ಕೇರಳ ಖಾದ್ಯ

ಮಹಾಂತೇಶ ಜಾಂಗಟಿ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ನೆಹರೂ ನಗರದ ಆರ್‌.ಕೆ. ರೆಸಿಡೆನ್ಸಿ ಕಟ್ಟಡದಲ್ಲಿರುವ ‘ಬೆನಾಯ್ಸ್‌ ಕೇರಳ ಫುಡ್‌ ಕೋರ್ಟ್‌’ನಲ್ಲಿ ಕೇರಳ ಸ್ಪೆಷಲ್‌ ಮೀನೂಟ ಸಿಗುತ್ತದೆ. ಇದು ಮೀನುಪ್ರಿಯರ ನೆಚ್ಚಿನ ಹೋಟೆಲ್‌ ಆಗಿದೆ.

ಸುರ್ಮಾಯಿ, ಬಾಂಗಡೆ ಹಾಗೂ ಪಾಂಪ್ಲೆಟ್‌ ಮೀನುಗಳ ಊಟವನ್ನು ಇಲ್ಲಿ ಸವಿಯಬಹುದಾಗಿದೆ. ಫುಲ್‌ ಮೀಲ್ಸ್‌ನಲ್ಲಿ ಒಂದು ಫ್ರೈ ಮಾಡಿದ ಮೀನು, ಮೀನಿನ ಸಾಂಬಾರ್, 2 ತರಹದ ಪಲ್ಯ, ಉಪ್ಪಿನಕಾಯಿ, ರಸಂ, ಮೋರ್ಕರ್‌ (ತರಕಾರಿ ಸಾಂಬಾರ), ಹಪ್ಪಳ ಹಾಗೂ ಕೇರಳ ರೆಡ್‌ ಬಾಯಿಲ್ಡ್‌ ರೈಸ್‌ ಕೊಡಲಾಗುತ್ತದೆ.

ಬಾಂಗಡೆ ಮೀನಿನ ಊಟಕ್ಕೆ ₹130, ಸುರ್ಮಾಯಿ ₹200 ಹಾಗೂ ಪಾಂಪ್ಲೆಟ್‌ ₹220 ಬೆಲೆ ಇದೆ. ಇದು ಸಾಮಾನ್ಯ ಮೀನಿನ ಊಟಕ್ಕಿಂತ ವಿಶೇಷ ರುಚಿ ಹೊಂದಿರುತ್ತದೆ. ಕೇರಳ ಶೈಲಿಯ ಆಹಾರವನ್ನು ಆಗಾಗ ಸವಿಯುವವರಿಗೆ ಹೆಚ್ಚು ಇಷ್ಟವಾಗುತ್ತದೆ. 

ವಿವಿಧ ಖಾದ್ಯಗಳು: ಮೀನೂಟದ ಜತೆಗೆ ಮೊಟ್ಟೆ, ಚಿಕನ್‌ ಹಾಗೂ ಮಟನ್‌ ಖಾದ್ಯಗಳು ಇಲ್ಲಿ ಸಿಗುತ್ತವೆ. ಎಗ್ ಆಮ್ಲೆಟ್‌ ಕರಿ ಸ್ಟೀವ್‌, ಎಗ್ ರೋಸ್ಟ್‌, ಚಿಕನ್‌ ಎವರ್‌ಗ್ರೀನ್‌, ಚಿಕನ್‌ ಸ್ಟೀವ್‌, ಮಟನ್‌ ಚಿಲ್ಲಿ, ಮಟನ್‌ ರೋಸ್ಟ್‌ ಅನ್ನು ಗ್ರಾಹಕರು ಹೆಚ್ಚು ಸೇವಿಸುತ್ತಾರೆ. ವೆಜ್‌ ಮಸಾಲಾ, ಫನ್ನಿರ್‌ ಮಸಾಲಾ, ಗ್ರೀನ್‌ ಪೀಸ್‌ ಮಸಾಲಾ ಸೇರಿ ಇನ್ನಿತರೇ ಸಸ್ಯಾಹಾರಿ ಖಾದ್ಯಗಳು ಕೂಡ ದೊರೆಯುತ್ತವೆ.

ಕೇರಳದ ಬೆನಾಯ್‌ ಜಾರ್ಜ್‌ ಅವರು 5 ವರ್ಷಗಳಿಂದ ಈ ಹೋಟೆಲ್‌ ನಡೆಸುತ್ತಿದ್ದಾರೆ. ‘ಹೋಟೆಲ್‌ ಸಮೀಪದಲ್ಲಿರುವ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಮೆಡಿಕಲ್‌ ಕಾಲೇಜಿನಲ್ಲಿರುವ ಕೇರಳ, ತಮಿಳುನಾಡು ಹಾಗೂ ಮಂಗಳೂರು ಭಾಗದ ವಿದ್ಯಾರ್ಥಿಗಳು ಹಾಗೂ ಅಲ್ಲಿಂದ ನಗರಕ್ಕೆ ಬಂದು ವಾಸವಾಗಿರುವ ಜನರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ಮಲೇಷಿಯಾ ದೇಶದ ವಿದ್ಯಾರ್ಥಿಗಳು ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಇಲ್ಲಿಗೆ ಊಟಕ್ಕೆ ಬರುತ್ತಾರೆ’ ಎಂದು ಜಾರ್ಜ್‌ ತಿಳಿಸಿದರು.

‘ಹೋಟೆಲ್‌ನ ಖಾದ್ಯಗಳನ್ನು ಇತ್ತೀಚೆಗೆ ಸ್ವಿಗ್ಗಿ ಹಾಗೂ ಜೊಮೆಟೊ ಮೂಲಕ ‘ಹೋಂ ಡೆಲಿವರಿ’ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅನೇಕರು ಮುಂಗಡ ಆರ್ಡರ್‌ ನೀಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 11.30 ರಿಂದ ರಾತ್ರಿ 10.30 ರವರೆಗೆ ಹೋಟೆಲ್‌ ತೆರೆದಿರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು