ಬುಧವಾರ, ಆಗಸ್ಟ್ 17, 2022
29 °C

ರಾಜಹಂಸಗಡ ಬಳಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಹೊರವಲಯದ ರಾಜಹಂಸಗಡ ಕೋಟೆಗೆ ಹೊಂದಿಕೊಂಡಿರುವ ಮತ್ತು ಆ ಮಾರ್ಗದ ಗುಡ್ಡದಲ್ಲಿನ ಪ್ರದೇಶದಲ್ಲಿ ಭಾನುವಾರ ಸಂಜೆ ಬೆಂಕಿ ಹೊತ್ತಿಕೊಂಡು, ಹತ್ತಾರು ಎಕರೆ ಪ್ರದೇಶದಲ್ಲಿ ಕುರುಚಲು ಗಿಡಗಳು ಸುಟ್ಟು ಹೋಗಿವೆ.

ಆ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಲ್ಲು ಬೆಳೆದಿತ್ತು. ಚಿಕ್ಕ ಗಿಡ ಹಾಗೂ ಮರಗಳೂ ಇವೆ. ಹುಲ್ಲು ಬಹುತೇಕ ಒಣಗಿದ ಸ್ಥಿತಿಯಲ್ಲಿದ್ದಿರಿಂದ ಬೆಂಕಿಯ ಕೆನ್ನಾಲಿಗೆಯು ಕ್ಷಣ ಮಾತ್ರದಲ್ಲಿ ವ್ಯಾಪಿಸಿದೆ. ಇದರಿಂದ ಹುಲ್ಲು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅವರಿಗೆ ಸ್ಥಳೀಯರೂ ನೆರವಾದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.