ಗುರುವಾರ , ಆಗಸ್ಟ್ 5, 2021
22 °C

ನಿರ್ಬಂಧದ ನಡುವೆಯೂ ರಾಜ್ಯ ಪ್ರವೇಶ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಅಂತರರಾಜ್ಯ ಪ್ರವೇಶ ನಿರ್ಬಂಧ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನೆರೆಯ ಮಹಾರಾಷ್ಟ್ರದ ಮೂವರನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಅವರಿಂದ ಐದು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಅವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಶಿವನಾಯಕವಾಡ ಮತ್ತು ಇಂಚಲಕರಂಜಿಯಿಂದ ಅನಧಿಕೃತವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವನಾಯಕವಾಡಿಯ ದತ್ತಾತ್ರೇಯ ಖೋತ, ಅಣ್ಣಾಸೋ ಖೋತ, ಇಚಲಕರಂಜಿಯ ಮಹೇಶ ಬರಬರೆ, ದಿನೇಶ ಮೋರಯಾ ಹಾಗೂ ಶಿರೋಳ ತಾಲ್ಲೂಕು ಯಡ್ರಾಂವದ ವಿಜಯಕುಮಾರ ಪಾಟೀಲ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.