ಗುರುವಾರ , ಅಕ್ಟೋಬರ್ 1, 2020
20 °C

ಮನೆ: ಸಂತ್ರಸ್ತರಿಂದ ಜಿಲ್ಲಾಧಿಕಾರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಳೆದ ವರ್ಷ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ತಮಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘7,861 ಮನೆಗಳು ಹಾನಿಯಾಗಿವೆ. ಮಂಜೂರಾದ ಮನೆಗಳಲ್ಲಿ 215 ಫಲಾನುಭವಿಗಳ ವರ್ಗ ಬದಲಾವಣೆ, 88 ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಇತರೆ ತಿದ್ದುಪಡಿ ಮತ್ತು 477 ಮಂದಿಯ ಸ್ಥಳ ಬದಲಾವಣೆಗಾಗಿ ಒಟ್ಟು 780 ಪ್ರಕರಣಗಳು ರಾಜೀವ್‌ಗಾಂದ ವಸತಿ ನಿಗಮದಲ್ಲಿ ಬಾಕಿ ಇವೆ. ತಂತ್ರಾಂಶದಲ್ಲಿ ನಮೂದಿಸಿದ 651 ಫಲಾನುಭವಿಗಳ ಹೆಸರುಗಳು ಹೈಡ್ ಮತ್ತು ಡಿಲೀಟ್ ಆಗಿವೆ. 985 ಫಲಾನುಭವಿಗಳ ಫೈಲ್‌ಗಳು ತಹಶೀಲ್ದಾರ್‌ ಕಾರ್ಯಾಲಯ ಮತ್ತು ಪಂಚಾಯಿತಿ ಮಟ್ಟದಲ್ಲಿ ಡೇಟಾ ಎಂಟ್ರಿಗೆ ಬಾಕಿ ಇವೆ. ಇದರಿಂದ ನಾವು ನಿರಾಶ್ರಿತರಾಗಿದ್ದೇವೆ. ವಸತಿ ಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಅಳಲು ತೋಡಿಕೊಂಡರು.

‘ಗೋಕಾಕ ತಾಲ್ಲೂಕಿನ ಗೋಕಾಕ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಕೊಣ್ಣೂರ, ಶಿಂಗಳಾಪೂರ, ಕುಂದರಗಿ, ಅಂಕಲಗಿ, ಮಲ್ಲಾಪೂರ ಪಿ.ಜಿ., ಧುಪದಾಳ, ಪಾಮಲದಿನ್ನಿ, ಉರಬಿನಹಟ್ಟಿ, ಶೀಗಿಹೊಳಿ, ಬೂದಿಹಾಳ, ಯದ್ದಲಗುಡ್ಡ, ಮಾಲದಿನ್ನಿ, ಉಪ್ಪಾರಹಟ್ಟಿ, ಖನಗಾಂವ, ಮಿಡಕನಟ್ಟಿ, ಹೂಲಿಕಟ್ಟಿ, ಕೊಳವಿ, ತವಗ, ಕೈತನಾಳ, ಕನಸಗೇರಿ, ಡುಮ್ಮ ಉರಬಿನಹಟ್ಟಿ, ಅರಭಾವಿ ದಾವಲತ್ತಿ, ಚಿಕ್ಕನಂದಿ, ತೆಳಗಿನಹಟ್ಟಿ, ಮಕ್ಕಳಗೇರಿ, ಮೂಡಲಗಿ ತಾಲ್ಲೂಕಿನ ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿ.ವೈ., ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಹುಣಶ್ಯಾಳ ಪಿ.ಜಿ., ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳದಲ್ಲಿ ಮನೆಗಳು ಹಾನಿಗೀಡಾಗಿವೆ’ ಎಂದು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಅಲ್ಲಪ್ಪ ಕಂಕಣವಾಡಿ, ರಮೇಶ ಬೀರನಗಡ್ಡಿ, ಕಾಮಪ್ಪ ಕಿತ್ತೂರ, ವಕೀಲರಾದ ಮುತ್ತೆಪ್ಪ ಕುಳ್ಳೂರ, ಬಿ.ಬಿ. ಬೀರನಗಡ್ಡಿ, ಕಾಮಸಿ ಕರೆನ್ನವರ, ಸಿದ್ದಪ್ಪ ಪೂಜೇರಿ, ಬಸವಂತ ಕಾಪಸಿ, ಅಡಿವೆಪ್ಪ ಹಂಜಿ, ಅಡಿವೆಪ್ಪ ಕಿತ್ತೂರ ಇದ್ದರು.

ಶಾಸಕರ ಪ್ರತಿಕ್ರಿಯೆ:

ಘಟಪ್ರಭಾ ನದಿ ಪ್ರವಾಹದಿಂದ 8ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಕೆಲವರಿಗೆ ಪರಿಹಾರ ದೊರೆತಿದೆ. ಕೆಲವರಿಗೆ ತಾಂತ್ರಿ ಸಮಸ್ಯೆಗಳು ಉಂಟಾಗಿದ್ದು, ಅದನ್ನು ನಿವಾರಿಸಿ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು