ಸೋಮವಾರ, ಮಾರ್ಚ್ 27, 2023
24 °C

ಸಂಚಾರ ನಿಯಮ ಪಾಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ಅನಾಹುತ, ಅಪಘಾತಗಳನ್ನು ತಪ್ಪಿಸಬಹುದು’ ಎಂದು ಎಡಿಜಿಪಿ ಮತ್ತು ಸಂಚಾರ ಹಾಗೂ ಸುರಕ್ಷತೆ ವಿಭಾಗದ ಆಯುಕ್ತ ಪಿ.ಎಸ್ ಸಂಧು ತಿಳಿಸಿದರು.

ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಆಟೊರಿಕ್ಷಾ, ಬಸ್, ಮಿನಿ ಬಸ್, ಸರಕು ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಪ್ರಯಾಣಿಕರು ಮತ್ತು ಕಾರ್ಮಿಕರನ್ನು ಸಾಗಿಸುವ ಕುರಿತು ಹೈಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ನಾಗರಿಕರು ಸಹಕಾರವನ್ನು ಮುಂದುವರಿಸಬೇಕು’ ಎಂದು ಕೋರಿದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋದಾ ವಂಟಗೋಡಿ, ಬೆಳಗಾವಿ, ವಿಜಯಪುರ, ಧಾರವಾಡ ಎಸ್ಪಿಗಳು, ಹೆಚ್ಚುವರಿ ಎಸ್‌ಪಿಗಳು, ಹೆಚ್ಚುವರಿ ಆಯುಕ್ತರು,  ಜಂಟಿ ಆಯುಕ್ತರು, ಆರ್‌ಟಿಒ, ಲೋಕೋಪಯೋಗಿ, ಕಾರ್ಮಿಕ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಮುಖ ಶಾಲೆಯ ಮುಖ್ಯಸ್ಥರು, ಪಾಲಕರು, ಸಾರ್ವಜನಿಕರು ಹಾಗೂ ಆಟೊರಿಕ್ಷಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

176 ಪ್ರಕರಣ ದಾಖಲು:

ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ಚಾಲಕರು ಹಾಗೂ ಮಾಲೀಕರ ವಿರುದ್ಧ ಸಂಚಾರ ಪೊಲೀಸರು ಒಟ್ಟು 176 ಪ್ರಕರಣಗಳನ್ನು ದಾಖಲಿಸಿ, ₹ 21,800 ದಂಡ ವಿಧಿಸಿದ್ದಾರೆ. 15 ಮಂದಿ ಚಾಲಕರು, ಮಾಲೀಕರ ಡಿಎಲ್‌ ಮತ್ತು ಆರ್‌ಸಿ ಅಮಾನತಿಗಾಗಿ ಸಾರಿಗೆ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು