ಅಥಣಿ: ಕೋವಿಡ್–19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾದ ದಿನಸಿ ಕಿಟ್‌ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು.

ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಕಾರ್ಮಿಕರಿಗೆ ಸೌಲಭ್ಯ ನೀಡಲಾಯಿತು. 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಸಕ್ಕರೆ, ಬೇಳೆ, ಎಣ್ಣೆ ಸೇರಿದಂತೆ ಕೆಲವು ಸಾಂಬಾರು ಪದಾರ್ಥಗಳನ್ನು ಕೊಡಲಾಯಿತು.

‘ಕೊರೊನಾ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳು ಬಡ ಕುಟುಂಬಗಳಿಗೆ ನೆರವಾಗುತ್ತಿವೆ. ಸರ್ಕಾರ ಜನರ ನೆರವಿಗೆ ಧಾವಿಸಿದೆ. ಯಾವುದೇ ಭಯ ಬೇಡ’ ಎಂದು ಕುಮಠಳ್ಳಿ ಹೇಳಿದರು.

‘ಕೊರೊನಾ ಮೇಲೆರಗು ಎತ್ತಿದ್ದಂತೆ. ಎತ್ತಿನ ಮೈಸವರಿದರೆ ಸಮಾಧಾನಗೊಳ್ಳುತ್ತದೆ. ಅಂತೆಯೇ ಕೊರೊನಾ ಬಗ್ಗೆಯೂ ಎಚ್ಚರವಾಗಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳಿಂದ ಈ ಸೋಂಕಿನಿಂದ ದೂರವಿರಬಹುದು. ಈ ರೋಗಕ್ಕೆ ಆದಷ್ಟು ಬೇಗನೆ ಔಷಧ ಸಿಗಲೆಂದು ಶಿವಯೋಗಿಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ಪಿಎಸ್‌ಐ ಕುಮಾರ ಹಾಡಕಾರ, ಅಥಣಿ ಕಾರ್ಮಿಕ ನಿರೀಕ್ಷಕ ಜಿ.ಬಿ. ಧೂಪದಾಳ, ಕೆಎಫ್‌ಸಿಯ ಎನ್.ಎನ್. ಗಾಣಿಗೇರ, ಶಶಿಕಾಂತ ಸಾಳವೆ, ವಿನಯ ಪಾಟೀಲ, ಅನಿಲ ಸೌದಾಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.