ಗುರುವಾರ , ಡಿಸೆಂಬರ್ 3, 2020
18 °C

ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿ ಈದ್ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ಪಟ್ಟಣದಲ್ಲಿ ಅಖಿಲ ಭಾರತ ಮುಸ್ಲಿಂ ಅಭಿವೃದ್ಧಿ ವೇದಿಕೆಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿ ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಎಲ್ಲಾ ಸಮುದಾಯದ ಅರ್ಹ ಬಡ, ವಿಧವಾ ಕುಟುಂಬಗಳಿಗೆ ದಿನ ಬಳಕೆಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಮನೆ, ಮನೆಗೆ ತೆರಳಿ ವಿತರಿಸಲಾಯಿತು.

ಸಂಘಟನೆ ಸಂಸ್ಥಾಪಕ ಸದಸ್ಯ ನಜೀರಅಹ್ಮದ್ ಮುಲ್ಲಾ ಮಾತನಾಡಿ, 'ಜಗತ್ತಿನ ಎಲ್ಲಾ ಕಡೆಗಳಲ್ಲೂ ಆಯಾ ಪ್ರದೇಶದ ಸಮಯಕ್ಕೆ ಹೊಂದಿಕೊಂಡು ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ ಸರಳವಾಗಿ ಹಬ್ಬ ನಡೆಸಲಾಗುತ್ತಿದೆ. ಜಗತ್ತಿಗೆ ಅಂಟಿಕೊಂಡಿರುವ ಕೊರೊನಾ ನಿರ್ಮೂಲನೆ ಜೊತೆಗೆ ಸಮೃದ್ಧ ಭಾರತ ನಿರ್ಮಾಣದ ಕನಸು ನನಸಾಗಲು ಎಲ್ಲರು ಶ್ರದ್ಧೆ, ಭಕ್ತಿಯಿಂದ ಕಾಯಕ ಮಾಡಿ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಂಅಲಿ ಕಾರೆಖಾಜಿ, ಮೌಲಾನಾ ಮುದಸ್ಸಿರ ತಿಗಡಿ, ಹಾಫೀಝ್ ಇಸಾಕ್, ಮೊಹಿನ ಮುಲ್ಲಾ, ಸಂಘಟನೆ ಸದಸ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.