ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಸೈಟಿಯಲ್ಲಿ ಕಳವು: ಆರೋಪಿ ಬಂಧನ

Last Updated 7 ಜನವರಿ 2021, 12:48 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಬಾಗಿಲಿನ ಕೀಲಿ ಮುರಿದು ಬೀರುವನ್ನು ಹಿಂದಿನಿಂದ ಕಟ್ ಮಾಡಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಸುಭಾಷ್ ನಗರದ ಮುಜಫರ್ ಮಹಮ್ಮದ್ ಶೇಖ್ ಬಂಧಿತ ಆರೋಪಿ. ಅವರಿಂದ ₹ 15 ಲಕ್ಷ ಮೌಲ್ಯದ 301 ಗ್ರಾಂ. ಚಿನ್ನಾಭರಣ, ₹ 1,01,650 ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ₹ 6.50 ಲಕ್ಷ ಮೌಲ್ಯದ ಹಾರ್ಲೆ ಡೆವಿನ್‌ಸನ್‌ ದ್ವಿಚಕ್ರವಾಹನ ಸೇರಿದಂತೆ ₹ 22,51,650 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೊಸೈಟಿಯಲ್ಲಿ ಕಳವಾಗಿದ್ದ ಬಗ್ಗೆ ಡಿ.31ರಂದು ನರೇಂಧ್ರ ಬಸವರಾಜ ಬೆಳಗಾವಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಮಾರ್ಕೆಟ್ ಉಪ ವಿಭಾಗದ ಎಸಿಪಿ ಸದಾಶಿವ ಕಟ್ಟೀಮನಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸುನೀಲ ಪಾಟೀಲ, ಪಿಐ ಮಹಾದೇವ ಕುಂಬಾರ, ಪಿಎಸ್‌ಐ ಹೊನ್ನಪ್ಪ ತಳವಾರ, ಎಎಸ್‌ಐ ಎ.ಆರ್. ದುಂಡಗಿ, ಎಂ.ಜೆ. ಕುರೇರ, ಕೆ.ಬಿ. ಗೌರಾಣಿ, ಜೆ.ಎನ್. ಭೋಸಲೆ, ಎಂ.ಎನ್. ಮುಶಾಪುರೆ, ಎಸ್.ಎಂ. ಗುಡದೈಗೋಳ, ಮಂಜುನಾಥ ಮೇಲಸರ್ಜಿ, ಎಂ.ಬಿ. ಅಡವಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ನಗರ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT