ಬುಧವಾರ, ಸೆಪ್ಟೆಂಬರ್ 22, 2021
21 °C

ಸಮೀರವಾಡಿಯಲ್ಲಿ 1994ರಿಂದ 2004ರ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ (ಬೆಳಗಾವಿ ಜಿಲ್ಲೆ): ಸಮೀಪದ ಸಮೀರವಾಡಿಯ ಸೋಮೈಯಾ ಶಿಶುನಿಕೇತನ ಪ್ರಾಥಮಿಕ ಹಾಗೂ ವಿನಯ ಮಂದಿರ ಪ್ರೌಢಶಾಲೆಯಲ್ಲಿ 1994ರಿಂದ 2004ರ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಗುರುಗಳನ್ನು ಪುಷ್ಪವೃಷ್ಟಿ ಮಾಡಿ ಬರಮಾಡಿಕೊಳ್ಳಲಾಯಿತು. ಪಾದಪೂಜೆ ನೆರವೇರಿಸಲಾಯಿತು. ಸನ್ಮಾನಿಸಲಾಯಿತು.

‘ವಿದ್ಯಾರ್ಥಿಗಳು ಗುರುಗಳಿಗೆ ಕೊಡುವ ಗೌರವವನ್ನು ತಂದೆ–ತಾಯಿಗೂ ನೀಡಬೇಕು. ಅವರಿಗೆ ಯಾವುದೇ ತೊಂದರೆ ಕೊಡದೆ, ನೋವಾಗದಂತೆ ನೋಡಿಕೊಳ್ಳಬೇಕು. ಕೊನೆಯ ಕ್ಷಣದವರೆಗೂ ಅವರಿಗೆ ಕೊರತೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ನಿವೃತ್ತ ಶಿಕ್ಷಕ ಎಸ್.ಎಚ್.ಕಟಗಿ ಹೇಳಿದರು.

‘ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ಬಾಂಧವ್ಯದ ಬೆಸುಗೆಯಾಗಿವೆ’ ಎಂದರು.

ವಿ.ಎಚ್. ಭಜಂತ್ರಿ, ಅರ್.ಎಸ್. ಕಲ್ಯಾಣಿ, ವಿ.ಕೆ. ಹೊಸಮನಿ, ಎಸ್.ಎಸ್. ನಡುವಿನಮನಿ, ಬಿ.ಎಸ್. ಬಾಗೇವಾಡಿ, ಅರ್.ಎಸ್. ಕಲ್ಯಾಣಿ, ಬಿ.ಬಿ. ಮಡಿವಾಳ, ಎಂ.ಪಿ. ಚನಂಪಣ್ಣವರ, ವಿ.ಆರ್. ಪೂಜಾರಿ, ಬಿ.ಬಿ. ಕೌಜಲಗಿ, ಎಂ.ವೈ. ಶಿವಕ್ಕಗೋಳ, ಜಿ.ಅರ್. ಮಾದರ, ಎಸ್.ವೈ. ಜಾಲಿಹಾಳ, ಎಸ್.ವೈ. ನವಲೆ, ಎಂ.ಬಿ. ಕುಳ್ಳೊಳ್ಳಿ, ಎ.ಎಸ್. ಬಿಳ್ಳೂರ, ಐ.ಜಿ. ಕಿರಗಿ, ಹಳೆಯ ವಿದ್ಯಾರ್ಥಿಗಳಾದ ಪಿಯೂಷ ಓಸ್ವಾಲ, ಮಹೇಶ ಕುರಿ, ಯಮನಪ್ಪ ಉಪ್ಪಾರ, ಜಗದೀಶ ಪಾಟೀಲ, ಜ್ಯೋತಿ ಯಲ್ಲಟ್ಟಿ, ದೀಪಾ ಬಂದಿ, ದೀಪಾ ಹೊಸೂರ, ಶಿವಲೀಲಾ ಹೊರಟ್ಟಿ ಇದ್ದರು.

ಮಹೇಶ ಪಾಟೀಲ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು