ರಸ್ತೆಯ ಮೇಲೆ ತ್ಯಾಜ್ಯ ಎಸೆದವರಿಗೆ ದಂಡ; ಶಾಕ್ ನೀಡಿದ ಪಾಲಿಕೆ
ಬೆಳಗಾವಿ: ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಕಿವಿಗೊಡದ ಹೋಟೆಲ್ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಮಹಾನಗರ ಪಾಲಿಕೆ ಶಾಕ್ ನೀಡಿದೆ. ಖಾನಾಪುರ ರಸ್ತೆಯ ಕೆಲವು ಹೋಟೆಲ್ಗಳಿಗೆ ಶನಿವಾರ ದಂಡ ವಿಧಿಸಿ, ಸುಮಾರು ₹ 12,500 ಸಂಗ್ರಹಿಸಿದೆ.
ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರ ಹೊರತಾಗಿಯೂ ಹೋಟೆಲ್ ತ್ಯಾಜ್ಯವನ್ನು ರಾತ್ರಿ ವೇಳೆ ರಸ್ತೆಯ ಮೇಲೆ ಸುರಿದು ಹೋಗುತ್ತಿದ್ದರು. ಇದನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು, ದಂಡ ವಿಧಿಸಿದರು.
ಐಎಕ್ಸ್ಜಿ ಬಾರ್ ಅಂಡ್ ರೆಸ್ಟೋರೆಂಟ್ಗೆ ₹ 2,000, ದತ್ತ ಭೇಲ್ವಾಲಾಗೆ ₹ 1,000, ನಿಗಪ್ಪ ತವಾರೆ ₹ 1,000, ಗುರುಕೃಪಾ ಹೋಟೆಲ್ಗೆ ₹ 2,000, ಧನಶ್ರೀ ಪಾನ್ ಶಾಪ್ ₹ 500, ಕೆ.ಎಂ. ಪುರೋಹಿತ ಸ್ವೀಟ್ಮಾರ್ಟ್ ₹ 2,000, ಹಣ್ಣಿನ ವ್ಯಾಪಾರಿ ಅಶೋಕಗೆ ₹ 2,000, ಲಸ್ಸಿ–ಕೆಫೆ ಹೋಟೆಲ್ಗೆ ₹ 2,000 ದಂಡ ವಿಧಿಸಲಾಗಿದೆ ಎಂದು ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.