ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಆರ್‌ಎಫ್‌ನಲ್ಲಿ ಜಿಐಟಿಗೆ ಸ್ಥಾನ

Last Updated 12 ಜೂನ್ 2020, 5:44 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಸಂಸ್ಥೆಗಳ ಶ್ರೇಣೀಕರಣ ವಿಧಾನ ಸಂಸ್ಥೆ (ಎನ್‌ಐಆರ್‌ಎಫ್‌) ಇತ್ತೀಚಿಗೆ ಹೊರತಂದಿರುವ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ನಗರದ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜು (ಜಿಐಟಿ) ಎಂಜಿನಿಯರಿಂಗ್‌ ವಿಭಾಗದಲ್ಲಿ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ತೋರಿದೆ.

‘ಜಿಐಟಿಯು 201ರಿಂದ 250ರ ಶ್ರೇಯಾಂಕದಲ್ಲಿ (ಬ್ಯಾಂಡ್‌) ಕಾಣಿಸಿಕೊಂಡಿದೆ. ದೇಶಾದ್ಯಂತ 1071 ಮತ್ತು ಕರ್ನಾಟಕದ 100 ಎಂಜಿನಿಯರಿಂಗ್ ಸಂಸ್ಥೆಗಳು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಈ ಶ್ರೇಣಿಯನ್ನು 5 ಗುಣಾತ್ಮಕ ಅಂಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಮಾಡಿದ ಸಾಧನೆಯನ್ನು ಗಮನಿಸಿ ನೀಡಲಾಗಿದೆ’ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

‘ಈ ಅಂಶಗಳನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯದ ಮಾರ್ಗದರ್ಶನದಲ್ಲಿ ಎನ್‌ಐಆರ್‌ಎಫ್‌ ರಚಿಸಿದ ಶಿಕ್ಷಣ ತಜ್ಞರ ತಂಡವು ಹಲವು ಮಾನದಂಡಗಳನ್ನು ಪರಿಗಣಿಸಿದೆ. ‘ಕಲಿಕೆ, ಓದು ಮತ್ತು ಸಂಪನ್ಮೂಲ’, ‘ಸಂಶೋಧನೆ ಮತ್ತು ವೃತ್ತಿಪರ ಕಾರ್ಯಚಟುವಟಿಕೆಗಳು’, ‘ಕಾಲೇಜಿನ ಫಲಿತಾಂಶ, ‘ಶಿಕ್ಷಣ, ಸಮಾಜ ಹಾಗೂ ವಿದ್ಯಾರ್ಥಿಗಳ ಮೇಲೆ ಪ್ರಭಾವ’ ಮತ್ತು ‘ಸಾರ್ವಜನಿಕರ ಅಭಿಪ್ರಾಯ’ ಈ ಗುಣಾತ್ಮಕ ಅಂಶಗಳನ್ನು ಆಧರಿಸಿ ಪರಿಶೀಲಿಸಿ ಈ ಪಟ್ಟಿ ಸಿದ್ಧಗೊಳಿಸಿದೆ.

ಈ ಸಾಧನೆಗೆ ಕೆಎಲ್‌ಎಸ್‌ ಸಂಸ್ಥೆಯ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT