ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಆರ್‌ಸಿಯುನಿಂದ ‘ಗೋಲ್ಡನ್ ಛಾನ್ಸ್’

Last Updated 10 ಮಾರ್ಚ್ 2021, 14:38 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ವು ದಶಮಾನೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಗೋಲ್ಡನ್ ಛಾನ್ಸ್‌’ ನೀಡುತ್ತಿದೆ.

‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. 2010ರಿಂದ 2019ರವರೆಗೆ ವಿವಿಧ ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲದ ಮತ್ತು ಪದವಿ ಪೂರ್ಣಗೊಳಿಸದ ಸ್ನಾತಕ (ಬಿಎ, ಬಿಎಸ್ಸಿ, ಬಿಎಸ್ಸಿ (ಸಿಎಸ್), ಬಿಕಾಂ, ಬಿಸಿಎ, ಬಿಬಿಎ, ಬಿಎಸ್‌ಡಬ್ಲ್ಯು, ಬಿಇಡಿ, ಬಿಪಿಇಡಿ) ಪದವಿಯ ಹಾಗೂ ಸ್ನಾತಕೋತ್ತರ (ಎಂಎ, ಎಂಎಸ್ಸಿ, ಎಂಕಾಂ, ಎಂಎಸ್‌ಡಬ್ಲ್ಯು, ಎಂಬಿಎ, ಎಂಸಿಎ, ಎಂಎಲ್‌ಐಸಿ) ಪದವಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವನ್ನು ಒಂದು ಬಾರಿ ಮಾತ್ರ ಕಲ್ಪಿಸಲಿದೆ. ಪರೀಕ್ಷೆಗಳನ್ನು ಮೇ/ಜೂನ್‌ನಲ್ಲಿ ನಡೆಸಲಾಗುವುದು’ ಎಂದು ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ ತಿಳಿಸಿದ್ದಾರೆ.

‘ಆಯಾ ವಿಭಾಗಗಳ ಅಥವಾ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿಗಳನ್ನು ಆನ್‌ಲೈನ್ ಮೂಲಕ ನಿಗದಿತ ಸಮಯದಲ್ಲಿ ಶುಲ್ಕದೊಂದಿಗೆ ಭರಿಸಬೇಕು. ಹೆಚ್ಚಿನ ಮಾಹಿತಿಗೆ https://rcub.ac.in/ ಜಾಲತಾಣಕ್ಕೆ ವೀಕ್ಷಿಸಬಹುದು. ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT