ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಕಾರ್ಯ ಮಾಡುವವರಿಗೆ ಉತ್ತಮ ಭವಿಷ್ಯ: ಸಿದ್ಧರಾಮೇಶ್ವರ ಸ್ವಾಮೀಜಿ

Published 13 ಫೆಬ್ರುವರಿ 2024, 5:12 IST
Last Updated 13 ಫೆಬ್ರುವರಿ 2024, 5:12 IST
ಅಕ್ಷರ ಗಾತ್ರ

ಅಥಣಿ: ‘ಹೆತ್ತವರ ಕಣ್ಣಲ್ಲಿ ನೀರು ತರಿಸುವವರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಬಬಲಾದಿಯ ಮೂಲಸಂಸ್ಥಾನ ಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಂದೇಶ್ವರದಲ್ಲಿ ಸೋಮವಾರ ನಡೆದ ಗಡಾಮ ಮುತ್ಯಾ ಜಾತ್ರೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಇಂದು ಜನರ ನಡೆ, ನುಡಿ ಸರಿಯಾಗಿಲ್ಲ. ಸಂಸ್ಕಾರದ ಕೊರತೆಯಿಂದ ವೃದ್ಧಾಶ್ರಮ, ಅನಾಥಾಶ್ರಮ ಹೆಚ್ಚುತ್ತಿರುವೆ. ಜನರು ಸ್ವಾರ್ಥಿಯಾಗುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಮನಃ ಪರಿವರ್ತನೆ ಮಾಡಿಕೊಳ್ಳಬೇಕು. ನಿರಂತರವಾಗಿ ಪರೋಪಕಾರ ಮಾಡಬೇಕು. ಸತ್ಕಾರ್ಯ ಮಾಡುವವರಿಗೆ ಮಾತ್ರ ಈ ಭೂಮಿಯಲ್ಲಿ ಉತ್ತಮ ಭವಿಷ್ಯವಿದೆ’ ಎಂದರು.

ಹಳಿಂಗಳಿ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಾವಳಗಿಯ ಪರಶುರಾಮ ಮಹಾರಾಜರು, ಸಿದಗೌಡ ಪಾಟೀಲ, ಪರಶುರಾಮ ಶರಣರು, ಬಾಳಾಸಾಹೇಬ ಪಾಟೀಲ, ಶಿವು ಚಂಡಕಿ, ವಿರೂಪಾಕ್ಷ ಹಿರೇಮಠ, ಸಿದ್ರಾಮಯ್ಯ ಮಠಪತಿ, ರಾಮಣ್ಣ ಪರಟಿ, ಗುರುಲಿಂಗ ತೇಲಿ, ಹನುಮಂತ ಬಡಿಗೇರ, ಡಾ.ಸುಭಾಸ ಚಂಡಕಿ ಉಪಸ್ಥಿತರಿದ್ದರು. ಶಿವಾನಂದ ಪಾಟೀಲ ನಿರೂಪಿಸಿದರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT