ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಸುಭೇದಾರ್‌ಗೆ ಸಂಭ್ರಮದ ಸ್ವಾಗತ

Last Updated 4 ಜುಲೈ 2021, 14:12 IST
ಅಕ್ಷರ ಗಾತ್ರ

ಐಗಳಿ (ಬೆಳಗಾವಿ ಜಿಲ್ಲೆ): ‘ಎಲ್ಲವನ್ನೂ ನೀಡುವ ದೇಶದ ರಕ್ಷಣೆಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧವಿರಬೇಕು’ ಎಂದು ನಿವೃತ್ತ ಸುಭೇದಾರ ಚಂದ್ರಶೇಖರ ಕೋಳಿ ಹೇಳಿದರು.

ಸಮೀಪದ ಅಡಹಳ್ಳಿ ಗ್ರಾಮದವರಾದ ಅವರು ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿದಾಗ ಗ್ರಾಮಸ್ಥರು ನೀಡಿದ ಸ್ವಾಗತ ಮತ್ತು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪೋಷಕರು ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಿ ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರಿಕರಾಗಿ ರೂಪಗೊಳ್ಳಬೇಕು’ ಎಂದರು.

ಗ್ರಾಮದ ರಾಮು ಕೋಳಿ, ಈರಗೌಡ ಪಾಟೀಲ, ಘಟಿವಾಳಪ್ಪ ಗುಡ್ಡಾಪೂರ, ಲಕ್ಷ್ಮಣ ಕೆಂಚಣ್ಣವರ, ರಾಮುಗೌಡ ಪಾಟೀಲ, ಸುನೀಲ ಕೆಂಚಣ್ಣವರ, ಬಸವರಾಜ ದುಳಶೆಟ್ಟಿ, ಪರಸಪ್ಪ ಅಥಣಿ, ಸಿದ್ದಪ್ಪ ಕೆಂಚಣ್ಣವರ, ಶ್ರೀಕಾಂತ ಕೋಳಿ, ರಾಜು ಕೆಂಚಣ್ಣವರ, ಮಹಾದೇವ ಪಾಟೀಲ, ಸದಾಶಿವ ಕೋಳಿ, ಸುರೇಶ ಕೋಳಿ, ಘೂಳಪ್ಪ ಕೋಳಿ, ಆನಂದ ದೂಳಶೆಟ್ಟಿ, ಕಲ್ಮೇಶ ಕಲಮಡಿ, ಅಣ್ಣಪ್ಪ ಅಥಣಿ, ಬಿಂದು ಕೋಳಿ, ಸಂಜು ಪನದಿ, ಪ್ರಭಾಕರ ಕೋಳಿ, ಪ್ರತಿಬಾ ಕೋಳಿ, ಮಂಗಲ ಪನದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT