ಶುಕ್ರವಾರ, ಸೆಪ್ಟೆಂಬರ್ 18, 2020
27 °C
ಸಿಪಿಐ ಅಲಿಸಾಬ್ ಐ.ಬಿ. ಅಭಿಮತ

ತಿಳಿವಳಿಕೆ ಕೊರತೆ: ದಾರಿ ತಪ್ಪುತ್ತಿರುವ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಿಳಿವಳಿಕೆ ಕೊರತೆಯಿಂದಾಗಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ’ ಎಂದು ಸಿಪಿಐ ಅಲಿಸಾಬ್ ಐ.ಬಿ. ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಸಹಾಯ ಪ್ರತಿಷ್ಠಾನದ ವತಿಯಿಂದ ಬ್ಯಾಂಕಿಂಗ್ ಪರೀಕ್ಷೆಗೆ ಸಂಬಂಧಿಸಿದಂತೆ 50 ಮಂದಿಗೆ 45 ದಿನಗಳ ಕಾಲ ಉಚಿತ ತರಬೇತಿ ನೀಡುತ್ತಿರುವ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

‘ಮಕ್ಕಳಿಗೆ ಭವಿಷ್ಯದ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು. ಬಡತನ ಶಾಪವಲ್ಲ. ಅದು ಸಾಧನೆಗೆ ಪ್ರೇರಣೆ ಪಡೆದುಕೊಳ್ಳುವುದಕ್ಕೆ ವರದಾನವಾಗಿದೆ. ಬಡತನಕ್ಕೆ ಸವಾಲೆಸೆದು ಉತ್ತಮ ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು. 

ಸಂ‍ಪನ್ಮೂಲ ವ್ಯಕ್ತಿ ಡಿ.ಡಿ. ಮೇಕನಮರಡಿ ಮಾತನಾಡಿ, ‘ಯುವ ಸಮೂಹ ಸಾಮಾಜಿಕ ಜಾಲತಾಣಗಳಿಗೆ ದಾಸರಾಗಿ ತಮ್ಮ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದೆ. ಅದನ್ನು ಬಿಟ್ಟು ಓದಿನ ಕಡೆಗೆ ಗಮನ ಕೊಡಬೇಕು. ಮಹಾನ್‌ ವ್ಯಕ್ತಿಗಳ ಜೀವನ ಸಾಧನೆಯನ್ನು ಓದಿ ತಿಳಿದುಕೊಂಡು, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮದಭಾವಿಯ ಶನಿದೇವ ಮಂದಿರದ ಪ್ರಧಾನ ಅರ್ಚಕ ಪ್ರವೀಣಶಾಸ್ತ್ರಿ ಹಿರೇಮಠ ಮಾತನಾಡಿ, ‘ವಿದ್ಯಾರ್ಥಿ ಜೀವನವು ಬಂಗಾರದ ಜೀವನ. ಇದನ್ನು ದುಶ್ಚಟಗಳಿಗೆ ದಾಸರಾಗಿ ಹಾಳು ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.

‘ಸಾಮಾಜಿಕ ಕಳಕಳಿಯುಳ್ಳ ಸಂಘ–ಸಂಸ್ಥೆಗಳು, ಪ್ರತಿಷ್ಠಾನಗಳು ಹೆಚ್ಚು ಹೆಚ್ಚು ಬೆಳೆಯಬೇಕು. ಸಹಾಯ ಪಡೆದು ಮುಂದೆ ಬಂದವರು ಸಮಾಜಮುಖಿಯಾಗಿ ರೂಪಗೊಳ್ಳಬೇಕು’ ಎಂದರು.

ಮುಖಂಡ ಸಂತೋಷ ಸಿಂದಗಿ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು. ಉದ್ಯಮಿ ಮಲ್ಲಿಕಾರ್ಜುನ ಬುಟಾಳಿ, ಮಲ್ಲಿಕಾರ್ಜುನ ಹುದ್ದಾರ, ರಾಜು ಗಾಲಿ, ಸಂತೋಷ ಬಡಕಂಬಿ, ಸಚಿನ ಅವಟಿ, ಶಶಿಧರ ಬರ್ಲಿ, ಚಂದ್ರಶೇಖರ ರೋಖಡಿ, ಅನುಪಮಾ ಗೆಜ್ಜಿ, ಸಂತೋಷ ಪವಾರ, ಶ್ರದ್ಧಾ ಕುಂಬಾರ, ಶ್ರದ್ಧಾ ಐಗಳಿ, ಅಶ್ವಿನಿ ಪೂಜಾರಿ, ಸುಜಾತಾ ಹಿರೇಮಠ, ಅಶ್ವಿನಿ ಹೂರಣಗಿ, ನಾಗರಾಜ ಬೆಳ್ಳಂಕಿ, ಎಂ.ಜೆ. ಪೂಜಾರಿ, ಜ್ಯೋತಿಬಾ ಭೋಸಲೆ, ರಾಜೇಶ್ವರಿ ಮುಳ್ಳಟ್ಟಿ, ಮೇಘಾ ದಡ್ಡನ್ನವರ, ಪೂಜಾ ಕೌಜಲಗಿ, ಅಭಿಷೇಕ ಚವಾಣ, ಸೌರಭ ಬೋರಾಡೆ, ಅಖಿಲೇಶ ಬೆಳವೀಕರ, ರೂಪಾ ಕಲಚಿಮ್ಮಡ, ರೇಣುಕಾ ಅಂಕಲಗಿ, ಶೈಲಜಾ ಬಿರಾದಾರ, ಸ್ವಾತಿ ಮರಾಠೆ, ಅಕ್ಷತಾ ಅಥಣಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.