ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಏಳ್ಗೆಗೆ ಭಾವೈಕ್ಯತೆ ಬುನಾದಿ: ಸಚಿವ ಸತೀಶ ಜಾರಕಿಹೊಳಿ

Last Updated 26 ಜನವರಿ 2019, 14:59 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವವನ್ನುಶನಿವಾರಸಡಗರ, ಸಂಭ್ರಮದಿಂದ ಅಚರಿಸಲಾಯಿತು. ಶಾಲೆ, ಕಾಲೇಜು, ಸರ್ಕಾರಿ ಕಚೇರಿ ಸೇರಿ ಸಂಘ–ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿಯೂ ಧ್ವಜಾರೋಹಣಮಾಡಿ,ಸ್ವಾತಂತ್ರ್ಯ ಹೋರಾಟಗಾರರತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ದೇಶದ ಏಳ್ಗೆಗಾಗಿ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸಿ, ಪರಸ್ಪರ ಭಾವೈಕ್ಯದಿಂದ ಬಾಳಬೇಕು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಬದಿಗೊತ್ತಿ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನಿರ್ಮೂಲನೆಗೆಕೈಜೋಡಿಸಬೇಕು’ಎಂದು ಹೇಳಿದರು.

‘ರಾಜ್ಯ ಸರ್ಕಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ವಿವಿಧ ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯುನ್ನತ ಪ್ರಗತಿ ಕಾಣಲಿದೆ’ ಎಂದರು.

‘ಅರಣ್ಯ ಇಲಾಖೆಯಿಂದಪ್ರಸಕ್ತ ವರ್ಷದಲ್ಲಿ ಆಧುನಿಕ ತಂತ್ರಾಂಶ, ಉಪಕರಣ, ಗಣಕೀಕರಣ, ಆಧುನಿಕ ಶಸ್ತ್ರಾಸ್ತ್ರಗಳು, ಡ್ರೋಣ್‌ ಕ್ಯಾಮೆರಾ ಇತ್ಯಾದಿಗಳನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲಾಗುವುದು. ಸೆಂಟರ್ ಫಾರ್ ಎಕ್ಸ್‌ಲೆನ್ಸ್‌ ಸ್ಥಾಪನೆ, ಅಳಿವಿನಿಂದ ಉಳಿವಿನೆಡೆಗೆ, ಡೀಮ್ಡ್‌ ಫಾರೆಸ್ಟ್‌ಗಳ ಮೋಜಣಿ ಮತ್ತು ಗಡಿ ಗುರುತಿಸುವಿಕೆ, ಹುಲ್ಲುಗಾವಲು ಪ್ರದೇಶಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ,ನಗರ ಪೊಲೀಸ್ ಆಯುಕ್ತಡಿ.ಸಿ. ರಾಜಪ್ಪ, ಎಸ್ಪಿ ಸುಧೀರಕುಮಾರ ರೆಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ಇದ್ದರು.

ಆಕರ್ಷಕ ಪಥಸಂಚಲನ:

ಇದಕ್ಕೂ ಮುಂಚೆ ಸಚಿವ ಜಾರಕಿಹೊಳಿ ಪಥಸಂಚಲನ ಪರಿವೀಕ್ಷಣೆ ಮಾಡಿದರು. ನಂತರ ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಹರಿರಾಮ ಶಂಕರ ಅವರ ನೇತೃತ್ವದಲ್ಲಿವಿವಿಧ ಪೊಲೀಸ್‌ ತಂಡಗಳು, ಶಾಲಾ, ಕಾಲೇಜು, ಎನ್‌ಸಿಸಿ, ಸೇವಾದಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ನಗರದ ಮಾಹೇಶ್ವರಿ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು. ಪೊಲೀಸ್‌ ಬ್ಯಾಂಡ್‌ ತಂಡದವರು ಲಯಬದ್ಧವಾಗಿ ವಾದ್ಯನುಡಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹೋರಾಟಗಾರರಿಗೆ ಸನ್ಮಾನ:

ಸ್ವಾತಂತ್ರ್ಯ ಹೋರಾಟಗಾರರಾದ ಅಪ್ಪಣ್ಣ ಕರಲಿಂಗಣ್ಣವರ, ರಾಜೇಂದ್ರ ಕಲಘಟಗಿ, ರಾಜಾರಾಮ ಕಬ್ಬೆ, ಭೀಮರಾಯಪ್ಪ ಜಮಾದಾರ, ಸಿದ್ದಪ್ಪ ಕಲ್ಲನಾಯ್ಕರ ಅವರನ್ನು ಸತ್ಕರಿಸಲಾಯಿತು. ಉತ್ತಮ ಸಾಧನೆಗೈದ ಕ್ರೀಡಾಪಟುಗಳಾದ ಮಹೇಶಕುಮಾರ ಲಂಗೋಟಿ, ಮಲಪ್ರಭಾ ಜಾಧವ, ಗೀತಾ ದಾನಪ್ಪಗೋಳ, ಶೀತಲ್ ಕೊಲ್ಹಾಪುರೆ, ಮನಿಶಾ ಪಾಟೀಲ, ಸುನೀಲಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಅತ್ಯುತ್ತಮ ಸೇವೆ ಸಲ್ಲಿಸಿದ ಮಹಾನಗರ ಪಾಲಿಕೆ ಪಾಲಿಕೆ ಆಯುಕ್ತ ಶಶಿಧರ ಕುರೇರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ್ ನಸಲಾಪುರೆ, ಎಇಇ ಎಂ.ಬಿ. ಕುಲಕರ್ಣಿ, ಮಾರುಕಟ್ಟೆ ಮೇಲ್ವಿಚಾರಕ ಎಂ.ಬಿ. ಕುಲಕರ್ಣಿ, ಪ್ರಥಮ ದರ್ಜೆ ಸಹಾಯಕ ಬಿ.ಆರ್. ಹೊಂಗಲ್ ಹಾಗೂಗೋಕಾಕದ ಕೃಷಿಅಧಿಕಾರಿ ಶೈಲಜಾ ಬೆಳ್ಳಂಕಿಮಠಗೆಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT