ಬೆಳಗಾವಿ: ಮದ್ಯದಂಗಡಿಗೆ ಎಮ್ಮೆಯನ್ನೂ ಕರೆ ತಂದ!

ಅಥಣಿ: ಇಲ್ಲಿ ಸೋಮವಾರದಿಂದ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದ್ದು, ಖರೀದಿಗೆ ಮದ್ಯಪ್ರಿಯರು ಮುಗಿಬಿದ್ದರು. ಬೆಳಿಗ್ಗೆ ಅಂಗಡಿ ಬಾಗಿಲು ತೆಗೆಯುವುದಕ್ಕೂ ಮುನ್ನವೇ ಜನರು ಸಾಲಿನಲ್ಲಿ ನಿಂತಿದ್ದರು.
ವ್ಯಕ್ತಿಯೊಬ್ಬರು ವೈನ್‌ಶಾಪ್‌ಗೆ ತಮ್ಮೊಂದಿಗೆ ಎಮ್ಮೆಯನ್ನೂ ಎಳೆತಂದಿದ್ದರು. ಅದನ್ನೂ ಕ್ಯೂನಲ್ಲಿ ನಿಲ್ಲಿಸಿಕೊಂಡಿದ್ದರು! ‘ನನ್ನದೊಂದು ನಂಬರ್ ಮತ್ತು ಎಮ್ಮೆಯದೊಂದು ನಂಬರ್. ಎರಡೆರಡು ಸಲ ಮದ್ಯ ಖರೀದಿಸಲು ಬಂದಿದ್ದೇನೆ. ಎಮ್ಮೆಗೂ ಕುಡಿಸುತ್ತೇನೆ’ ಎಂದು ಅವರು ತಿಳಿಸಿದರು. ‘ನಾಳೆ ಬಹುಶಃ ಮದ್ಯ ಸಿಗದಿರಬಹುದು; ಹೀಗಾಗಿ, ಹೆಚ್ಚಿಗೆ ಖರೀದಿಸಲು ಬಂದಿದ್ದೇನೆ’ ಎಂದರು.
ಪಟ್ಟಣದಲ್ಲಿ ಕೆಲವು ಕಡೆಗಳಲ್ಲಷ್ಟೇ ಮದ್ಯದ ಅಂಗಡಿಗಳು ತೆರೆದಿದ್ದವು. ‘ಪರಿಸ್ಥಿತಿಯ ಲಾಭ ಪಡೆದು ಬಹುತೇಕರು ಶೇ 25ರಷ್ಟು ಹೆಚ್ಚುವರಿ ದರ ವಿಧಿಸಿದರು’ ಎಂದು ಗ್ರಾಹಕರು ತಿಳಿಸಿದರು.
ಮೂಲ ದರಕ್ಕಿಂತ ಹೆಚ್ಚಿಗೆ ದರಕ್ಕೆ ಮಾರಾಟ ಮಾಡುತ್ತಿದ್ದ ಮಳಿಗೆಯವರ ವಿರುದ್ಧ ಕೆಲವರು ಗಲಾಟೆ ಮಾಡಿದ ಘಟನೆಯೂ ನಡೆದಿದೆ. ಬಹುತೇಕ ಕಡೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಸ್ಟಾಕ್ ಖಾಲಿಯಾಗಿದೆ.
ವೈನ್‌ಶಾಪ್‌ವೊಂದರ ಬಳಿ, ಗ್ರಾಹಕರು ಅಂತರ ಕಾಪಾಡಿಕೊಂಡಿರಲಿಲ್ಲ ಮತ್ತು ನೂಕು ನುಗ್ಗಲು ಮಾಡುತ್ತಿದ್ದರು. ಇದನ್ನು ಗಮನಿಸಿದ ಮಾಲೀಕರೆ ನೇರವಾಗಿ ದೊಣ್ಣೆಯಿಂದ ಬಾರಿಸಿ ರುಚಿ ತೋರಿಸಿದ ಘಟನೆಯೂ ಜರುಗಿದೆ.
ಬೆಳಿಗ್ಗೆ ನಂತರ ಅಂತರ ಪಾಲನೆಯಾಗಲಿಲ್ಲ. ಮಾಸ್ಕ್ ಹಾಕದೇ, ಹ್ಯಾಂಡ್ ಸ್ಯಾನಿಟೈಸರ್ ಬಳಸದೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ್ದು ಕಂಡುಬಂತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.