ಗುರುವಾರ , ಜನವರಿ 28, 2021
15 °C
ಮಾನವ ಬಂಧುತ್ವ ವೇದಿಕೆಯಿಂದ ಕಾರ್ಯಕ್ರಮ

ವಿಜೇತರಿಗೆ ಹೆಲಿಕಾಪ್ಟರ್ ವಿಹಾರ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ಮಾನವ ಬಂಧುತ್ವ ವೇದಿಕೆಯಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜ. 10ರಂದು ಬೆಳಿಗ್ಗೆ 10ಕ್ಕೆ ಅಕ್ಷರ ತಾಯಿಗೆ ನಮನ– ‘ಸಾವಿತ್ರಿಬಾಯಿ ಫುಲೆ ಜಯಂತಿ’ ಆಚರಣೆ, ರಾಜ್ಯ ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ.

ವೇದಿಕೆ ಸಂಸ್ಥಾಪಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಡಾ.ವಿನಯ ವಕ್ಕುಂದ ಮತ್ತು ಡಾ.ಯಲ್ಲಪ್ಪ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ್‌ ಭಾಗವಹಿಸುವರು.

ಸಾವಿತ್ರಿಬಾಯಿ ಫುಲೆ ಜಯಂತಿ ಹಿನ್ನೆಲೆಯಲ್ಲಿ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸುವುದಾಗಿ  ಪ್ರಕಟಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಆಯ್ಕೆಯಾದವರಿಗೆ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಮತ್ತು ಯಮಕನಮರಡಿ ಶಾಸಕರೂ ಆಗಿರುವ ಸತೀಶ ಜಾರಕಿಹೊಳಿ ಅವರೊಂದಿಗೆ ಹೆಲಿಕಾಪ್ಟರ್ ವಿಹಾರದ ಅವಕಾಶವನ್ನೂ ಕಲ್ಪಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಬಂಧ ಸ್ಪರ್ಧೆ ವಿಜೇತರು: ವೈಷ್ಣವಿ ಕಡೋಲ್ಕರ್ (ಬೆಳಗಾವಿ), ಜ್ಯೋತಿ ಗುದ್ದೀನ (ಶಿರಗುಪ್ಪಿ), ಸುಧಾ ಕರ್ಲಿ (ರಾಯಚೂರು), ಸಿಮ್ರಾನ್ ಬಾಗವಾನ್ (ಯಾದವಾಡ), ಮಾನಸ ವಿ. (ಚಾಮರಾಜನಗರ).

ಭಾಷಣ ಸ್ಪರ್ಧೆ ವಿಜೇತರು: ಪೂಜಾ ತೀರ್ಥಹಳ್ಳಿ (ತೀರ್ಥಹಳ್ಳಿ), ಮುಷ್ರಫ್ ಸೈಯಡ್ (ಘಟಪ್ರಭಾ), ಪ್ರಯಂಕಾ ಭರಣಿ (ಕಲಬುರ್ಗಿ), ಪವಿತ್ರಾ ಹತ್ತರವಾಟ (ಮೆಳವಂಕಿ), ಶ್ವೇತಾ ಜುಗಳೆ (ಧಾರವಾಡ), ಶಾಮಲಾ ಭರಮಾ ಹಿರೋಜಿ (ಕಲಖಾಂಬ).

2021ರ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರು: ಬೆಳಗಾವಿ- ಲಕ್ಷ್ಮೀದೇವಿ ನಾಯಕ, ಸುನೀತಾ ದುಂಡಪ್ಪ ನರಸಣ್ಣವರ,  ಕಿತ್ತೂರು- ಶಾಂತಾ ಎಚ್. ಸಾವಕ್ಕನವರ, ಖಾನಾಪುರ - ಶೀತಲ ಸುಭಾಷ ಚೌಗಲೆ, ಬೈಲಹೊಂಗಲ- ಮಹಾಲಕ್ಷ್ಮಿ ಕೆ.ಸಿ., ಸವದತ್ತಿ- ಮಹಾದೇವಿ ರವಳಪ್ಪ ಫಂಡಿ, ಯರಗಟ್ಟಿ- ಲಲಿತಾ ಗಲಗಲಿ, ರಾಮದುರ್ಗ- ಅನಸೂಯಾ ಎನ್. ಸಾವಳಗಿ, ಗೋಕಾಕ- ಮಹಾನಂದ ಯಲ್ಲನಗೌಡ ಪಾಟೀಲ, ಮೂಡಲಗಿ- ರಾಧಾ ಎಂ.ಎನ್., ಹುಕ್ಕೇರಿ- ನನ್ನಿಮಾ ಕಾಗಜಿ, ಮಮತಾ ಸಾಗರ ಭೋಸಲೆ, ನಿಪ್ಪಾಣಿ- ಸುಧಾ ಶಂಕರ ಖಾಡೆ, ಚಿಕ್ಕೋಡಿ- ಸರೋಜಿನಿ ಕುಂದರಗಿ, ರಾಯಬಾಗ- ಶಬಾನಾ ಅನ್ವರಖಾನ ದೇಸಾಯಿ, ಕಾಗವಾಡ- ಗಾಯತ್ರಿ ಅಶೋಕ ಮಾಳಗೆ ಮತ್ತು ಅಥಣಿ- ಮಂಜುಳಾ ಮಹಾಂತೇಶ ನಾಗನಾಥ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.