ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 22 ಶುಕ್ರವಾರ– ಇಂದು ಈ ರಾಶಿಯವರಿಗೆ ಹಿರಿಯರ ಆಶೀರ್ವಾದ
Published 21 ಸೆಪ್ಟೆಂಬರ್ 2023, 18:35 IST
ಪ್ರಜಾವಾಣಿ ವಿಶೇಷ
author
ಮೇಷ
ಯಾವುದೇ ವಾದ ವಿವಾದ ನಡೆದರೂ ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗಲಾರದು. ಸಮೀಪವರ್ತಿಗಳ ಆಶ್ವಾಸನೆ ದೊರೆತು ಶುಭ ಕಾರ್ಯಗಳತ್ತ ಗಮನ ಹರಿಸುವಿರಿ. ಸಾಹಿತ್ಯ ಸಂಗೀತ ವಿಷಯಗಳತ್ತ ಮನಸ್ಸು ತಿರುಗುವುದು
ವೃಷಭ
ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಮನಸ್ಸಿನ ಅಸ್ಥಿರತೆ ಆಧ್ಯಾತ್ಮ ಚಿಂತನೆಗೆ ತೊಂದರೆ ಮಾಡುವುದು. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
ಮಿಥುನ
ಆರನೇ ಇಂದ್ರಿಯದ ಮಾತಿಗೆ ಬೆಲೆ ಕೊಡುವುದು ಸರಿಯಾದ ತೀರ್ಮಾನ ಅನಿಸುವುದು. ಲೇವಾದೇವಿ ವ್ಯವಹಾರ ನಿಮ್ಮ ಸಂಪತ್ತಿನ ಕ್ಷೀಣತೆಗೆ ಹಾದಿಯಾಗುವುದು. ಹಿರಿಯರ ಆಶೀರ್ವಾದ ಪಾಲಿಗಿದೆ.
ಕರ್ಕಾಟಕ
ಶತ್ರುಗಳ ಉಪಟಳವನ್ನು ಎದುರಿಸುವ ಸಾಮರ್ಥ್ಯ ಈ ದಿನ ಭಗವಂತ ನೀಡಲಿದ್ದಾನೆ. ಕಲಾವಿದರಿಗೆ ಹಾಗೂ ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣಗಳು ಸಿಗಲಿವೆ. ಹೊಂದಾಣಿಕೆ ಅಗತ್ಯ.
ಸಿಂಹ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯವಾದ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿಯ ಮಾಹಿತಿ ದೊರೆಯುತ್ತದೆ. ಆಭರಣ ಮಾರಾಟಗಾರರು, ವಕೀಲ ವೃತ್ತಿಯವರಿಗೆ ಹೆಚ್ಚಿನ ಕೆಲಸವಿರುವುದು.
ಕನ್ಯಾ
ಧೈರ್ಯ ಮತ್ತು ಪ್ರೇರಣಾ ಶಕ್ತಿಯ ಭಾವವನ್ನು ಹೊಂದುವುದರಿಂದ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು. ಸಂಸ್ಥೆಯ ಮುಖಾಂತರ ಹೆಚ್ಚಿನ ತರಬೇತಿಗಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.
ತುಲಾ
ಕೌಟುಂಬಿಕವಾಗಿ ಎಷ್ಟೇ ಕಷ್ಟ ಬಂದರೂ ಹಿಡಿದ ದಾರಿ ಬಿಡಬಾರದೆಂಬ ಮನೋಭಾವ ದೇಹಾಯಾಸ ಮೂಲಕ ಗುರಿ ತಲುಪಲಿದೆ. ಫೋಟೋ ಸ್ಟುಡಿಯೊದವರಿಗೆ ಅಧಿಕ ಕಾರ್ಯಕ್ರಮದಿಂದ ಲಾಭಾಂಶ ಇರಲಿದೆ.
ವೃಶ್ಚಿಕ
ಸಿಮೆಂಟ್ ವ್ಯಾಪಾರಸ್ಥರಿಗೆ ಅಧಿಕ ಲಾಭ. ಶ್ರೀ ಗುರು ನರಸಿಂಹ ದೇವರ ಸ್ತುತಿ, ಸೇವೆ ಮಾಡಿ. ಖಾಸಗಿ ಸಂಸ್ಥೆಗಳ ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಕಾರ್ಯ ಒಪ್ಪಂದದ ಬಗ್ಗೆ ದೃಢ ನಿರ್ಧಾರ ಮಾಡಿರಿ.
ಧನು
ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಬೇಕಾದ ತಯಾರಿ ಮಾಡಿಕೊಳ್ಳಿ. ತರಕಾರಿ ವ್ಯಾಪಾರಸ್ಥರಿಗೆ ಲಾಭಾಂಶದಲ್ಲಿ ಕೊರತೆ . ಭದ್ರ ಮಾಡಿ ಇಟ್ಟಂತಹ ವಸ್ತುಗಳು ಕಣ್ಮರೆಯಾಗಬಹುದು.
ಮಕರ
ಅಪೇಕ್ಷಿಸಿದ ಪ್ರಗತಿಯು ದೇವತಾನುಗ್ರಹದಿಂದ ಪ್ರಾಪ್ತಿಯಾಗುವುದು. ಹೆಂಡತಿಯ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಸುಬ್ರಹ್ಮಣ್ಯನನ್ನು ಆರಾಧಿಸುವುದರಿಂದ ಆರೋಗ್ಯಭಾಗ್ಯ ಉಂಟಾಗುತ್ತದೆ.
ಕುಂಭ
ಸಂಸ್ಥೆಯೊಂದರ ಸಲಹೆಗಾರರಾಗಿರುವ ನಿಮಗೆ ಹೆಚ್ಚಿನ ಒತ್ತಡ ಮತ್ತು ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ಲೇವಾದೇವಿ ವ್ಯವಹಾರಗಳು ಸಾಧಾರಣ ಮಟ್ಟದಲ್ಲಿ ನಡೆಯುವುದು. ನವಗ್ರಹ ಪೂಜೆಯ ಶುಭ ವಾರ್ತೆ ಪಡೆಯುವಿರಿ.
ಮೀನ
ಮುಖ್ಯವಾಗಿ ಅಪರಿಚಿತ ಜಾಗದಲ್ಲಿ, ಅಪರಿಚಿತ ವ್ಯಕ್ತಿಗಳಲ್ಲಿ ಉದ್ವೇಗಗೊಳ್ಳದೆ ತಾಳ್ಮೆಯಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಕಾರ್ಮಿಕರ ಬೇಡಿಕೆಗಳನ್ನು ಪರಿಶೀಲಿಸಿ. ನ್ಯಾಯ ಸಮ್ಮತವಾಗಿ ವ್ಯವಹರಿಸಿ.
ADVERTISEMENT
ADVERTISEMENT