ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆವಿಮೆ: ಜುಲೈ 31 ಕೊನೆ ದಿನ

Published 29 ಜೂನ್ 2024, 6:42 IST
Last Updated 29 ಜೂನ್ 2024, 6:42 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಸಕ್ತ ಮುಂಗಾರು ಹಂಗಾಮಿಗೆ ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ಬೆಳೆವಿಮೆ ಪಾವತಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದೆ.

ಬೆಳೆಗಳನ್ನು ಆಯಾ ತಾಲ್ಲೂಕಿಗೆ ವಿಂಗಡಣೆ ಮಾಡಲಾಗಿದೆ. ಪ್ರತಿ ಹೆಕ್ಟೇರ್ ದ್ರಾಕ್ಷಿ ಬೆಳೆಗೆ ₹14 ಸಾವಿರ, ದಾಳಿಂಬೆಗೆ ₹6,350, ಮಾವು ಬೆಳೆಗೆ ₹4,000 ಹಾಗೂ ಹಸಿಮೆಣಸಿನಕಾಯಿ ಬೆಳೆಗೆ ₹3,550 ವಿಮಾ ಕಂತು ನಿಗದಿಯಾಗಿದೆ.

ಸಂಬಂಧಪಟ್ಟ ತಾಲ್ಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ 0831 2431559, ಗೋಕಾಕ 08332 229382, ಖಾನಾಪುರ 0833 6223387, ಸವದತ್ತಿ 08330 222082, ಅಥಣಿ 08289 285099, ರಾಮದುರ್ಗ 08335 241512, ರಾಯಬಾಗ 08331 225049, ಹುಕ್ಕೇರಿ 08333 265915, ಚಿಕ್ಕೋಡಿ 08338 274943, ಬೈಲಹೊಂಗಲ 08288 233758 ಹೋಬಳಿ ಮತ್ತು ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ (ಜಿ.ಪಂ) ಬೆಳಗಾವಿ ಉಪನಿರ್ದೇಶಕ  ಮಹಾಂತೇಶ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT